ಹೈದರಾಬಾದ್, ನ 26(DaijiworldNews/MS): ತಮ್ಮನ್ನು ಪ್ರಧಾನಿ ಮೋದಿ ಅವರ ಸ್ನೇಹಿತ ಎಂದು ಕರೆದಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ವಿರುದ್ದ ಸಿಡಿಮಿಡಿಕೊಂಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ "ರಾಹುಲ್ ಗಾಂಧಿ ಅವರಿಗೆ ಇಬ್ಬರು ಪ್ರೇಮಿಗಳಿದ್ದಾರೆ" ಲೇವಡಿ ಮಾಡಿದ್ದಾರೆ.
ಹೈದರಾಬಾದ್ನಲ್ಲಿ ಚುನಾವಣಾ ಪ್ರಚಾರ ವೇಳೆ ಮಾತನಾಡಿದ ಓವೈಸಿ," ರಾಹುಲ್ ಗಾಂಧಿ ಬದುಕಿನಲ್ಲಿ ಪ್ರೇಮವಿರುವುದು ಎರಡರಲ್ಲೇ, ಒಂದು ಇಟಲಿ, ಎರಡನೆಯವರು ಮೋದಿ. ಇಟಲಿಯಿಂದ ಅವರ ಅಮ್ಮ ಬಂದಿರುವವರು ಹಾಗೂ ಮೋದಿ ರಾಹುಲ್ಗೆ ಶಕ್ತಿ ನೀಡಿದವರು, ಹೀಗಾಗಿ ಈ ಎರಡು ವಿಷಯದಲ್ಲಿ ರಾಹುಲ್ ಗೆ ಪ್ರೇಮ " ಎಂದು ಹೇಳಿದ್ದಾರೆ
"ರಾಹುಲ್ ಗಾಂಧಿ ಅವರಿಗೆ ನಾನು ಮನವಿ ಮಾಡುತ್ತೇನೆ. ದಯವಿಟ್ಟು ಇನ್ನೂ ಒಂಟಿಯಾಗಿ ಇರಬೇಡಿ. ನಿಮಗೆ ಈಗ 50 ವರ್ಷ ದಾಟಿದೆ" ಎಂದು ಅಣಕಿಸಿದ ಅವರು, ರಾಹುಲ್ ಗಾಂಧಿಯ ಸೋಲು ಕಾಂಗ್ರೆಸ್ನ 'ಹಾಥೇಲಿ' (ಅಂಗೈ) ಆಗಲಿದೆಯೇ ಅಥವಾ ಬೇರೊಬ್ಬರ 'ಪಹೇಲಿ' (ಒಗಟು) ಆಗಲಿದೆಯೇ ಎಂಬುದು ಕುತೂಹಲಕಾರಿ" ಎಂದು ಟೀಕಿಸಿದ್ದಾರೆ.