ಮುಂಬೈ, ನ 26 ( DaijiworldNews/HR): ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಇಂದಿಗೆ 15 ವರ್ಷ. 26 ನವೆಂಬರ್ 2008 ರಂದು ನಡೆದ ಭಯೋತ್ಪಾದಕ ದಾಳಿಗೆ 174 ಮಂದಿ ಬಲಿಯಾಗಿದ್ದರು.
2008ರ ನವೆಂಬರ್ 26 ರಾತ್ರಿ ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ಸಂಘಟನೆಯ ಉಗ್ರರು ಮುಂಬೈ ನಗರವನ್ನು ಪ್ರವೇಶಿಸಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದ್ರೌ.
ಇನ್ನು ಮುಂಬೈ ಭಯೋತ್ಪಾದನಾ ದಾಳಿಯ 15ನೇ ವರ್ಷದ ಸ್ಮರಣಾರ್ಥವಾಗಿ ಇಸ್ರೇಲ್ ದೇಶವು ಲಷ್ಕರ್-ಎ-ತಯ್ಬಾವನ್ನು ಭಯೋತ್ಪಾದಕ ಸಂಘಟನೆಯ ಪಟ್ಟಿಗೆ ಸೇರಿಸಲಾಗಿದೆ ಎಂದು ಇಸ್ರೇಲ್ ರಾಯಭಾರ ಕಚೇರಿ ದೆಹಲಿಯಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.
ಈ ಕ್ರಮದ ಹಿಂದೆ ಭಾರತ ಸರ್ಕಾರದ ಯಾವುದೇ ಪಾತ್ರವಿಲ್ಲ. ಇಸ್ರೇಲ್ ಎಲ್ಲಾ ಅಗತ್ಯ ಕಾರ್ಯವಿಧಾನಗಳನ್ನು ಔಪಚಾರಿಕವಾಗಿ ಪೂರ್ಣಗೊಳಿಸಿದೆ ಮತ್ತು ಲಷ್ಕರ್-ಎ-ತಯ್ಬಾವನ್ನು ಇಸ್ರೇಲಿ ಅಕ್ರಮ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸಲು ಅಗತ್ಯವಿರುವ ಎಲ್ಲಾ ಪರಿಶೀಲನೆ ಮತ್ತು ನಿಬಂಧನೆಗಳನ್ನು ಪೂರೈಸಲಾಗಿದೆ ಎಂದು ವರದಿಯಾಗಿದೆ.