ಹಾಸನ, ಏ 17(Daijiworld News/MSP): ಮಂಗಳವಾರ ಮದ್ಯರಾತ್ರಿ ಸುಮಾರು 12.45ರ ಸಮಯದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಬೆಂಗಾವಲು ಪಡೆ ವಾಹನದಲ್ಲಿದ್ದ 1.20 ಲಕ್ಷ ಹಣವನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಹಾಸನದ ಹೊಳೆನರಸೀಪುರದ ಬಳಿ ಇರೋ ಚನ್ನಾಂಬಿಕಾ ಚಿತ್ರಮಂದಿರ ಸಮೀಪ ನಗದನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹೊಳೆನರಸೀಪುರ ಚಿತ್ರಮಂದಿರದ ಬಳಿಯೇ ಸಚಿವ ಹೆಚ್.ಡಿ ರೇವಣ್ಣ ನಿವಾಸವಿದ್ದು ಅವರ ಬೆಂಗಾವಲು ವಾಹನವನ್ನು ತಪಾಸಣೆ ನಡೆಸುತ್ತಿದ್ದಾಗ ಹಣ ಪತ್ತೆಯಾಗಿದೆ. ಚುನಾವಣಾಧಿಕಾರಿ ವಿಕಾಸ್ ಎಂಬವರ ದೂರಿನ ಮೇರೆಗೆ ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ವಾಹನ ಚಾಲಕ ಚಂದ್ರಯ್ಯ ಹಾಗೂ ರವಿ ಎಂಬವರ ವಿರುದ್ದ ದೂರು ದಾಖಲಾಗಿದೆ.
ಚುನಾವಣಾಧಿಕಾರಿ ತಪಾಸಣೆ ಮಾಡುವ ಸಂದರ್ಭ ಬೆಂಗಾವಲು ಪಡೆ ಚಾಲಕ ಚಂದ್ರಯ್ಯ, ಪೊಲೀಸ್ ಸಿಬ್ಬಂದಿ ಮತ್ತು ರವಿ ಎನ್ನುವವರು ಇದ್ದರು.