ಬಿಜ್ನೋರ್, ನ 24 (DaijiworldNews/PC): ಸಾಧಿಸಲೇ ಬೇಕೆಂಬ ಛಲವೊಂದಿದ್ದರೆ ಯಾವುದೇ ಆರ್ಥಿಕ ಅಡೆತಡೆಯೂ ಲೆಕ್ಕಕ್ಕೆ ಬರೊದಿಲ್ಲ ಅನ್ನುವುದು ಸತ್ಯ. ಈ ಮಾತಿಗೆ ತಕ್ಕಂತೆ ಸಾಧಿಸಿದ ರೈತನ ಮಗಳು.
ಚಾರುಲ್ ಹೊನರಿಯಾ ಇವರು ಪ್ರಥಮ ಪ್ರಯತ್ನ ವಿಫಲವಾದರೂ ತನ್ನ ಛಲ ಹಾಗೂ ಪ್ರಯತ್ನವನ್ನೂ ಬಿಡದೇ ತನ್ನ ಶ್ರಮದಿಂದ 2020 ರ ನೀಟ್ನಲ್ಲಿ ಅತ್ಯುತ್ತಮ ಅಂಕ ಪಡೆದವರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಇವರ ಈ ಸ್ಪೂರ್ತಿದಾಯಕ ಜೀವನ ಕಥೆ ಇಲ್ಲಿದೆ. .
ಚಾರುಲ್ ಹೊನರಿಯಾ ಕುಟುಂಬಕ್ಕೆ ಆರ್ಥಿಕ ಸಂಕಷ್ಟವು ಜೀವನದ ಬಹುದೊಡ್ಡ ಸವಾಲಾಗಿತ್ತು. ಇವರ ತಂದೆಯು ಸಣ್ಣ ಪ್ರಮಾಣದ ರೈತ ಮತ್ತು ಕೂಲಿಯಾಗಿ ಅಲ್ಪ ಆದಾಯವನ್ನು ಸಂಪಾದಿಸುತ್ತಿದ್ದರು. ಇವರಿಗೆ ಕೇವಲ 8000 ರೂ.ಗಳ ಮಾಸಿಕ ಆದಾಯದೊಂದಿಗೆ, ಏಳು ಜನರ ಕುಟುಂಬವನ್ನು ಪೋಷಿಸುವುದು ಅಷ್ಟು ಸುಲಭವಾಗಿರಲಿಲ್ಲ. ಈ ಸವಾಲುಗಳ ನಡುವೆಯೂ ಚಾರುಲ್ ತನ್ನ ಬಾಲ್ಯದ ವೈದ್ಯೆಯಾಗುವ ಕನಸನ್ನು ಹೊಂದಿದ್ದರು. ಇವರು 10 ನೇ ತರಗತಿಯಿಂದ ನೀಟ್ ಪರೀಕ್ಷೆ ಬಗ್ಗೆ ಒಲವನ್ನು ಹೊಂದಿದ್ದರು, ಆದರೆ ಆರ್ಥಿಕ ಪರಿಸ್ಥಿತಿಯಿಂದ ಅತ್ಯಂತ ಕಷ್ಟವನ್ನು ಅನುಭವಿಸಿದರು, ನಂತರ ವಿವಿಧ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಸಲ್ಲಿಸಿ ನಂತರ ಅವರು ನೀಟ್ ಕೋಚಿಂಗ್ ಪ್ರವೇಶವನ್ನು ಪಡೆದರು.
ಚಾರುಲ್ ಅವರು ಸುಮಾರು ಎರಡು ವರ್ಷಗಳ ಕಾಲ ನಿರಂತರ ಕಠಿಣ ಪ್ರಯತ್ನಗಳನ್ನು ಮಾಡಿದರು, ಅದೇ ಸಮಯದಲ್ಲಿ ಅವರ ದ್ವಿತೀಯ ಪಿಯುಸಿ ಫಲಿತಾಂಶ ಬಂತು. ಅದರಲ್ಲಿ ಅವರು ಸುಮಾರು 93 ಶೇ. ಅಂಕವನ್ನು ಗಳಿಸಿದರು. ಇದರ ಬಳಿಕ ಇವರ ಮುಖ್ಯ ಗುರಿ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಸಾಧಿಸಿ ರಾಷ್ಟ್ರದ ಪ್ರಧಾನ ವೈದ್ಯಕೀಯ ಸಂಸ್ಥೆಯಾದ AIIMS ನಲ್ಲಿ ಪ್ರವೇಶವನ್ನು ಪಡೆಯುವುದಾಗಿತ್ತು.
ಅದರೆ ದುರದೃಷ್ಟವಶಾತ್ ಚಾರುಲ್ ಅವರು ತಮ್ಮ ಮೊದಲನೇ ಪ್ರಯತ್ನದಲ್ಲಿ ವಿಫಲರಾದರೂ . ಅದರೆ ನೀಟ್ 2020 ರ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಹೊರ ಹೊಮ್ಮಿದರು. ಇವರ ಈ ಸಾಧನೆಯು ಅವರಿಗೆ 631 ರ ಅಖಿಲ ಭಾರತ ಶ್ರೇಣಿಯನ್ನು ಪಡೆಯಲ್ಲಿ ಯಶಸ್ಸಿಯಾದರು. ಇದು AIIMS ನವದೆಹಲಿಗೆ ಅವಳ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿತು. ಈ ಮೂಲಕ ಚಾರುಲ್ ವೈದ್ಯೆಯಾಗುವ ಕನಸನ್ನು ನನಸಾಯಿತು.