ಉತ್ತರಕಾಶಿ, ನ 24 (DaijiworldNews/PC): ಉತ್ತರಕಾಶಿಯಲ್ಲಿ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ನಿರಂತರ ಪ್ರಯತ್ನವನ್ನು ಮಾಡಲಾಗುತ್ತಿದ್ದು, ಕೆಲವೊಮ್ಮೆ ಮೆಷಿನ್ಗಳು ಕೈಕೊಡುತ್ತಿವೆ. ಈ ಮಧ್ಯೆ ಸುರಂಗದೊಳಗೆ ಪೈಪ್ಗಳನ್ನು ಜೋಡಿಸಲು ವೆಲ್ಡಿಂಗ್ ಮಾಡುತ್ತಿರುವ ಹೊಗೆ, ಕಾರ್ಮಿಕರ ಮೂಗಿಗೆ ಬಡಿದಿದೆ. ಇದರಿಂದ ಕಾರ್ಮಿಕರಲ್ಲಿ ಸುರಂಗದಿಂದ ಹೊರಹೋಗುತ್ತೇವೆ ಎಂಬ ಆಶಾಭಾವ ಮೂಡಿದೆ.
ಸುರಂಗದ ಕಡೆಯ ಹಂತದ ಡ್ರೀಲಿಂಗ್ ವೇಳೆ ತಾಂತ್ರಿಕ ಸಮಸ್ಯೆ ಎದುರಾದ ಬಳಿಕ ಕಾರ್ಯಚರಣೆ ನಿಲ್ಲಿಸಲಾಗಿದ್ದು ನ.24ಬೆಳಗ್ಗೆಯಿಂದ ಮತ್ತೆ ಪುನಾರಂಭಗೊಂಡಿದ್ದು, ಈವರೆಗೂ ರಕ್ಷಣಾ ತಂಡವು 50 ಮೀಟರ್ಗಳವರೆಗೆ ಕೊರೆದಿದ್ದಾರೆ. ಸುರಂಗದೊಳಗೆ ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಲು ಇನ್ನೂ 10 ಮೀಟರ್ಗಳು ಉಳಿದಿವೆ.
ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ನಿರಂತರವಾಗಿ ಶ್ರಮ ಹಾಕಲಾಗುತ್ತಿದೆ. ಕೆಲವೊಮ್ಮೆ ಮೆಷಿನ್ಗಳು ಹಾಳಾಗುತ್ತಿದೆ. ಈ ಮಧ್ಯೆ ಸುರಂಗದೊಳಗೆ ಪೈಪ್ಗಳನ್ನು ಜೋಡಿಸಲು ವೆಲ್ಡಿಂಗ್ ಮಾಡುತ್ತಿರುವ ಹೊಗೆ, ಕಾರ್ಮಿಕರ ಮೂಗಿಗೆ ಬಡಿದಿದೆ. ಇದರಿಂದ ಕಾರ್ಮಿಕರಲ್ಲಿ ಸುರಂಗದಿಂದ ಹೊರಹೋಗುತ್ತೇವೆ ಎಂಬ ಆಶಾಭಾವ ಮೂಡಿದೆ. ಕಾರ್ಮಿಕರರಿಗೆ ವೆಲ್ಡಿಂಗ್ ವಾಸನೆ ತಲುಪಿರುವುದನ್ನು ವಾಕಿಟಾಕಿ ಮೂಲಕ ಕಾರ್ಮಿಕರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿಗೆ ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ. ಟನಲ್ ಒಳಗೆ ಇರುವ ಕಾರ್ಮಿಕರ ಪರಿಸ್ಥಿತಿ ಮತ್ತು ರಕ್ಷಣಾ ಕಾರ್ಯಚರಣೆಯಲ್ಲಿರುವ ರಕ್ಷಣಾ ತಂಡಗಳ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ನಿನ್ನೆಯಷ್ಟೆ ಸಿಎಂ ಧಾಮಿ ಟನಲ್ ಒಳಗಿರುವ ಕಾರ್ಮಿಕರ ಜೊತೆಗೆ ಮಾತುಕತೆ ನಡೆಸಿ ಸಾಧ್ಯವಾದಷ್ಟು ಬೇಗ ಎಲ್ಲರನ್ನು ಹೊರ ಕರೆತರುವ ಭರವಸೆ ನೀಡಿದ್ದಾರೆ.