ವಿಜಯಪುರ , ನ 24 (DaijiworldNews/AK): ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿಗಾಗಿ ನನ್ನ ಮನೆಗೆ ಬರುವುದು ಬೇಡ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಖಡಕ್ ಆಗಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾದ ನನ್ನ ಕ್ಷೇತ್ರದ ಅಭಿವೃದ್ಧಿಗೆ ಬರೆಯುತ್ತಿದ್ದ ಪತ್ರಗಳನ್ನೆಲ್ಲ ಈ ವಿಜಯೇಂದ್ರ ತನ್ನ ಬಳಿ ಇರಿಸಕೊಳ್ಳುತ್ತಿದ್ದ. ವಿಜಯಪುರ ನಗರ ಕ್ಷೇತ್ರದ ಅಭಿವೃದ್ದಿಗೆ ಬಿಡುಗಡೆ ಆಗಿದ್ದ 125 ಕೋಟಿ ರೂ. ಅನುದಾನವನ್ನು ತಡೆ ಹಿಡಿಯುವಲ್ಲಿ ವಿಜಯೇಂದ್ರ ಪಾತ್ರವಿದೆ ಎಂದು ಕಿಡಿ ಕಾರಿದರು.
ನನ್ನನ್ನು ಮಂತ್ರಿ ಮಾಡದೇ ಹಾಗೂ ಪಕ್ಷದಿಂದ ನನ್ನನ್ನು ಹೊರ ಹಾಕುವಲ್ಲಿ ಇವರು ಮಾಡಿರುವ ಎಲ್ಲ ನಾಟಕಗಳು ನನಗೆ ಗೊತ್ತಿದೆ.ಈಗ ನಾಟಕೀ ಯವಾಗಿ ನನ್ನ ಭೇಟಿಗೆ ಹೂಗುಚ್ಚ ಹಿಡಿದು ನನ್ನ ಮನೆಗೆ ಬಂದು ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವ ಇವರ ಹುನ್ನಾರ ನನಗೆ ಗೊತ್ತಿದೆ. ರಾಜಕೀಯವಾಗಿ ತುಳಿಯಲು ಯತ್ನಿಸಿದ ವಿಜಯೇಂದ್ರ ನನ್ನ ಮನೆಗೆ ಬರುವುದು ಬೇಡ ಎಂದು ಕಿಡಿ ಕಾರಿದರು.
2024 ರಲ್ಲಿಯೂ ಮೋದಿ ಅವರನ್ನೇ ದೇಶದ ಪ್ರಧಾನಿ ಮಾಡುವ ಸಂಕಲ್ಪ ಮಾಡಿದ್ದೇ ವೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ತಾಯಿ ಮೇಲಾಣೆ, ದೇವರ ಸಾಕ್ಷಿಯಾಗಿ ಬಿಜೆಪಿಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇ ವೆ ಎಂದರು.
ನಾನು ಮಾತ್ರವಲ್ಲ ಸೋಮಣ್ಣ, ಸತೀಶ ಜಾರಕಿಹೊಳಿ, ಅರವಿಂದ ಬೆಲ್ಲದ, ಸುನೀಲ್ ಕುಮಾರ್, ಅರವಿಂದ ಲಿಂಬಾವಳಿ ಎಲ್ಲರೂ ಬಿಜೆಪಿ ಪರವಾಗಿಯೇ ಲೋಕಸಭೆಯಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದೇ ವೆ ಎಂದರು.