ನವದೆಹಲಿ,ಏ 17(Daijiworld News/MSP): ದೇಶದ ಲೋಕಸಭಾ ಚುನಾವಣೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಚುನಾವಣೆ ರದ್ದುಗೊಳಿಸಲ್ಪಟ್ಟ ಕ್ಷೇತ್ರ ವೆಂಬ ಕುಖ್ಯಾತಿ ವೆಲ್ಲೂರಿಗೆ ದೊರಕಿದೆ. ಕುರುಡು ಕಾಂಚಾಣದ ಸದ್ದಿಗೆ ಚುನಾವಣೆ ರದ್ದುಗೊಳಿಸಬೇಕಾದ ಸ್ಥಿತಿ ಬಂದೊದಗಿದ್ದು, ಈ ಹಿನ್ನಲೆಯಲ್ಲಿ ತಮಿಳುನಾಡಿನ ವೆಲ್ಲೂರಿನಲ್ಲಿ ಎ.18ರಂದು ನಡೆಯಬೇಕಾಗಿದ್ದ ಲೋಕಸಭಾ ಚುನಾವಣೆಯನ್ನು ರದ್ದುಗೊಳಿಸಲಾಗಿದೆ.
ಲೋಕಸಭಾ ಚುನಾವಣೆ ಮಾತ್ರ ರದ್ದುಗೊಳಿಸಲಾಗಿದ್ದು ಆದರೆ ಇಲ್ಲಿನ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆ ನಿಗದಿಯಾದಂತೆ ನಡೆಯಲಿದೆ.
ತಮಿಳುನಾಡಿನ ವೆಲ್ಲೂರಿನಲ್ಲಿ ಎ.18ರಂದು ನಡೆಯಬೇಕಾಗಿದ್ದ ಲೋಕಸಭಾ ಚುನಾವಣೆಯನ್ನು ರದ್ದುಗೊಳಿಸಲಾಗಿದೆ. ದೇಶದ ಲೋಕಸಭಾ ಚುನಾವಣ ಇತಿಹಾಸದಲ್ಲೇ ಮೊದಲ ಬಾರಿಗೆ ಚುನಾವಣೆ ರದ್ದುಗೊಳಿಸಲ್ಪಟ್ಟ ಕ್ಷೇತ್ರ ವೆಂಬ ಕುಖ್ಯಾತಿಗೆ ವೆಲ್ಲೂರು ಪಾತ್ರವಾಗಿದೆ. ಆದರೆ ಇಲ್ಲಿನ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆ ನಿಗದಿಯಾದಂತೆ ನಡೆಯಲಿದೆ.
ಮತದಾರರ ಮೇಲೆ ಪ್ರಭಾವ ಬೀರಲು ಅಪಾರ ಪ್ರಮಾಣದ ನಗದು, ಮದ್ಯ ಮುಂತಾದವುಗಳನ್ನು ಹಂಚಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಚುನಾವಣೆ ರದ್ದು ಮಾಡಲು ನಿರ್ಧಾರ ಕೈಗೊಂಡು ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಿಕೊಡಲಾಯಿತು. ಚುನಾವಣೆ ಆಯೋಗದ ಶಿಫಾರಸಿನ ಮೇರೆಗೆ ವೆಲ್ಲೂರು ಚುನಾವಣೆ ರದ್ದು ಮಾಡಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದರು.
ಲ ದಿನಗಳ ಹಿಂದೆ ಅಂದರೆ ಮಾ. 29ರಂದು ಡಿಎಂಕೆಯ ನಾಯಕ ದುರೈ ಮುರುಗನ್ ಪುತ್ರ ಕಾತಿರ್ ಆನಂದ್ ನಿವಾಸದಲ್ಲಿ 11 ಲಕ್ಷ ರೂ.ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಇದದೊಂದಿಗೆ ಎ. 1ರಂದು ದುರೈಮುರುಗನ್ ಅವರ ಒಡೆತನದ ಕಾಲೇಜಿನಿಂದ ಸಾಗಾಟ ಮಾಡಲಾಗಿದ್ದ 11.53 ಕೋಟಿ ರೂ.ಗಳನ್ನು ಜಪ್ತಿ ಮಾಡಲಾಗಿತ್ತು.. ಇದರೊಂದಿಗೆ ಹಲವೆಡೆ ನಡೆಸಲಾದ ದಾಳಿಗಳಿಂದ 2,500 ಕೋಟಿ ರೂ. ಮೊತ್ತದ ಮಾದಕ ದ್ರವ್ಯಗಳು, ಮದ್ಯ, ಬೆಲೆಬಾಳುವ ಲೋಹ, ಉಡುಗೊರೆಗಳನ್ನು ಜಪ್ತಿ ಮಾಡಲಾಗಿತ್ತು.