ಬೆಂಗಳೂರು,ಏ.16(Daijiworld News/AZM) : 2ನೇ ಹಂತದ ಲೋಕಸಭಾ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಗಳನ್ನು ನೇಮಕ ಮಾಡಿದ್ದು. 14 ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಆದೇಶದಂತೆ ಇಂದು 9 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಏಪ್ರಿಲ್ 19 ರಿಂದ 21ರವರೆಗೆ ಉಸ್ತುವಾರಿವಹಿಸಿರುವ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಬೇಕು. ಪ್ರಚಾರ ಕಾರ್ಯಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಮೈತ್ರಿ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡಬೇಕು ಎಂದು ತಿಳಿಸಲಾಗಿದೆ.
ಉಸ್ತುವಾರಿಗಳ ಪಟ್ಟಿ
ವಿಜಯಪುರ - ಎಚ್.ಸಿ.ಮಹದೇವಪ್ಪ
ರಾಯಚೂರು - ಡಾ.ಎಂ.ವೀರಪ್ಪ ಮೊಯ್ಲಿ
ಧಾರವಾಡ - ಕೃಷ್ಣ ಬೈರೇಗೌಡ
ಬೆಳಗಾವಿ - ಯು.ಟಿ.ಖಾದರ್
ಹಾವೇರಿ - ಜಮೀರ್ ಅಹಮದ್ ಖಾನ್
ದಾವಣಗೆರೆ - ಕೆ.ಎಚ್.ಮುನಿಯಪ್ಪ
ಶಿವಮೊಗ್ಗ ಲೋಕಸಭಾ ಕ್ಷೇತ್ರ - ಡಿ.ಕೆ.ಸುರೇಶ್
ಬಳ್ಳಾರಿ - ಆರ್.ಧ್ರುವನಾರಾಯಣ
ಉತ್ತರ ಕನ್ನಡ - ಬಿ.ಕೆ.ಹರಿಪ್ರಸಾದ್