ಹುಬ್ಬಳ್ಳಿ, ನ 21 (DaijiworldNews/AK) : ರಾಜಕೀಯ ಆಡಳಿತದಲ್ಲಿ ಮಕ್ಕಳ ಹಸ್ತಕ್ಷೇಪ ಸರಿಯಲ್ಲ ಎಂದು ಸಂಸದೆ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಮ್ಮ ತಾಯಿಯವರು ತಾವು ಇರೋವರೆಗೆ ರಾಜಕೀಯಕ್ಕೆ ಬರಬೇಡ ಅಂತಾ ಹೇಳಿದ್ದಾರೆ. ಹೀಗಾಗಿ ನಾನು ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲ್ಲ. ಸೇವೆ ಮಾಡುವಂತಹ ಕೆಲಸಗಳಿದ್ದರೆ, ಮಾತ್ರ ಭಾಗವಹಿಸುತ್ತೇನೆ. ರಾಜಕೀಯ ಆಡಳಿತದಲ್ಲಿ ಮಕ್ಕಳ ಹಸ್ತಕ್ಷೇಪ ಸರಿಯಲ್ಲ ಎಂದಿದ್ದಾರೆ.
ಸಿನಿಮಾ ಅಂದ್ರೆ ದುಡ್ಡು ಕೊಟ್ಟು ಜನ ನಮ್ಮನ್ನ ನೋಡಲು ಬರ್ತಾರೆ. ಆದ್ರೆ ರಾಜಕಾರಣಕ್ಕೆ ನಾವೇ ದುಡ್ಡು ಕೊಟ್ಟು ಜನರನ್ನ ಕರಿಬೇಕು. ಹಾಗಾಗಿ ನಾನು ಯಾವ ಕಾರಣಕ್ಕೂ ರಾಜಕೀಯಕ್ಕೆ ಬರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿನಿಮಾ ರಂಗ ಬೇರೆ, ರಾಜಕಾರಣ ಬೇರೆ. ಅಂಬರೀಶಣ್ಣ 34 ವರ್ಷ ಚಿತ್ರರಂಗದಲ್ಲಿದ್ದು ನಂತರ ರಾಜಕೀಯಕ್ಕೆ ಬಂದರು ಎಂದು ಹೇಳಿದ್ದಾರೆ.