ಉತ್ತರಕಾಶಿ, ನ 21 (DaijiworldNews/MS): ಉತ್ತರಕಾಶಿಯ ಸಿಲ್ಕ್ಯಾ ರಾ ಸುರಂಗದಲ್ಲಿ ಸಿಲುಕಿರುವ 41 ಮಂದಿ ಕಾರ್ಮಿಕರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದ್ದು ಒಳಗೆ ಸಿಲುಕಿರುವ ಕಾರ್ಮಿಕರ ಮೊದಲ ದೃಶ್ಯಗಳು ಬಿಡುಗಡೆ ಆಗಿದೆ.
ಕಾರ್ಮಿಕರಿಗೆ ಸಾಕಷ್ಟು ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ತಲುಪಿಸುವ ಉದ್ದೇಶದಿಂದ ಅವಶೇಷ ಗಳ ನಡುವೆ ಲಂಬವಾಗಿ 42 ಮೀಟರ್ ದೂರ ಆರು ಇಂಚು ಅಗಲದ ಪೈಪ್ಲೈನ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದ್ದು, , ಇದು ಎಂಟು ದಿನಗಳ ಕಾಲ ಒಳಗೆ ಸಿಕ್ಕಿಬಿದ್ದ 41 ಕಾರ್ಮಿಕರ ದೊಡ್ಡ ಪ್ರಮಾಣದ ಆಹಾರ ಪೂರೈಸಲ ಮತ್ತು ಲೈವ್ ದೃಶ್ಯಗಳನ್ನು ನೋಡಲು ಸಹಾಯ ಮಾಡಿದೆ.
ಮಾಧ್ಯಮದೊಂದಿಗೆ ಮಾತನಾಡಿದ ಕರ್ನಲ್ ದೀಪಕ್ ಪಾಟೀಲ್, ಏಜೆನ್ಸಿಗಳು ಈಗ ಕಾರ್ಮಿಕರಿಗೆ ಆಹಾರ, ಮೊಬೈಲ್ ಮತ್ತು ಚಾರ್ಜರ್ಗಳನ್ನು ಕಳುಹಿಸುತ್ತವೆ. "ನಾವು ಒಳಗೆ ವೈಫೈ ಸಂಪರ್ಕವನ್ನು ಸ್ಥಾಪಿಸಲು ಪ್ರಯತ್ನಿಸುತ್ತೇವೆ" ಎಂದು ಹೇಳಿದ್ದಾರೆ.