ಹೈದರಾಬಾದ್ ,ನ 20 (DaijiworldNews/AK) : ಕೌಶಲ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಟಿಡಿಪಿ ಮುಖ್ಯಸ್ಥ, ಮಾಜಿ ಸಿಎಂ ಎನ್. ಚಂದ್ರಬಾಬು ನಾಯ್ಡುಅವರಿಗೆ ಆಂಧ್ರಪ್ರದೇಶ ಹೈಕೋರ್ಟ್ಸೋಮವಾರ ಜಾಮೀನು ನೀಡಿದೆ.
ಅವರ ನಾಲ್ಕು ವಾರಗಳ ಅವಧಿಯ ಮಧ್ಯಂ ತರ ವೈದ್ಯಕೀಯ ಜಾಮೀನನ್ನು ನ್ಯಾಯಾಲಯವು ಸಾಮಾನ್ಯ ಜಾಮೀನಾಗಿ ಪರಿವರ್ತಿಸಿ, ಅದೇ ಆಧಾರದಲ್ಲಿ ಅವರನ್ನು ಬಿಡುಗಡೆಗೊಳಿಸಲು ಆದೇಶಿಸಿದೆ.ನಾಲ್ಕು ವಾರಗಳ ಮಧ್ಯಂತರ ಜಾಮೀನು ನೀಡಿತು, ಅವರು ಈಗ ಹೈದರಾಬಾದ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2014 ರಿಂದ 2019 ರವರೆಗೆ ತೆಲುಗು ದೇಶಂ ಪಕ್ಷದ ಆಡಳಿತದಲ್ಲಿ ಎಪಿ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೊರೇಶನ್ನಲ್ಲಿ ನಡೆದ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ 73 ವರ್ಷದ ನಾಯ್ಡು ಅವರನ್ನು ಸೆಪ್ಟೆಂಬರ್ 9 ರಂದು ಆಂಧ್ರಪ್ರದೇಶ ಸಿಐಡಿ ಬಂಧಿಸಿತ್ತು.