ಬೆಂಗಳೂರು, ನ.20 (DaijiworldNews/PC): ಮುರುಘಾಶ್ರೀ ಜಾಮೀನು ರಹಿತ ಬಂಧನದ ವಾರಂಟ್ಗೆ ಹೈಕೋರ್ಟ್ ತಡೆ ನೀಡಿದೆ. ನ್ಯಾ.ಸೂರಜ್ ಗೋವಿಂದರಾಜ್ರವರಿದ್ದ ಪೀಠ ಆದೇಶ ಹೊರಡಿಸಿದೆ. ಜಿಲ್ಲಾ ನ್ಯಾಯಾಲಯದ ಆದೇಶದಿಂದ ಆರೋಪಿ ಮುರುಘಾಶ್ರೀಗೆ ಅನ್ಯಾಯವಾಗಿದೆ.
ಹಾಗಾಗಿ ಜಾಮೀನು ರಹಿತ ಬಂಧನದ ವಾರೆಂಟ್ಗೆ ಹೈಕೋರ್ಟ್ ತಡೆ ನೀಡಿದೆ. ಚಿತ್ರದುರ್ಗಕ್ಕೆ ಕರೆತಂದಿರುವುದು ಹೈಕೋರ್ಟ್ ಆದೇಶದ ಉಲ್ಲಂಘನೆ ಆಗಿದೆ. ಮುರುಘಾಶ್ರೀ ಬಿಡುಗಡೆಗೊಳಿಸುವಂತೆ ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮುರುಘಾಶ್ರೀ ವಿರುದ್ಧದ 2ನೇ ಪೋಕ್ಸೋ ಕೇಸ್ನಲ್ಲಿ ಮಧ್ಯಂತರ ಆದೇಶವಿದೆ. ಮುಂದಿನ ಆದೇಶದವರೆಗೂ ವಿಚಾರಣೆ ಮುಂದೂಡುವಂತೆ ಜಿಲ್ಲಾ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
1ನೇ ಪೋಕ್ಸೋ ಕೇಸ್ನಲ್ಲಿ ಹೈಕೋರ್ಟ್ ಜಾಮೀನು ನೀಡಿದೆ. ಚಿತ್ರದುರ್ಗ ಪ್ರವೇಶಿಸದೇ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಸೂಚಿಸಿದೆ. ಹೀಗಿರುವಾಗ ಸ್ಥಳೀಯ ಅಭಿಯೋಜಕರು ಜಿಲ್ಲಾ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಮುರುಘಾಶ್ರೀ ಕೋರ್ಟ್ಗೆ ಹಾಜರಾಗುತ್ತಿಲ್ಲವೆಂದು ದೂರಿದ್ದಾರೆ.
ಹೈಕೋರ್ಟ್ ಚಿತ್ರದುರ್ಗಕ್ಕೆ ಪ್ರವೇಶಿಸದಂತೆ ಷರತ್ತು ವಿಧಿಸಿದೆ. ಹೈಕೋರ್ಟ್ ಆದೇಶದಂತೆ ವಿಚಾರಣೆಯನ್ನು ಮುಂದೂಡಬೇಕಿತ್ತು. ಆದರೆ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಕೇಸ್ ಬೇರೆಯದಾದರೂ ನಿರ್ಬಂಧ ಬದಲಾಗುವುದಿಲ್ಲ. ಈಗ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.