ಚಾಮರಾಜನಗರ, ಎ16(Daijiworld News/SS): ಅಂಬೇಡ್ಕರ್ ಪ್ರತಿಮೆ ಧ್ವಂಸ ಮಾಡಿ, ಸಂವಿಧಾನ ಸುಟ್ಟುಹಾಕಿ ಎನ್ನುವ ಬಿಜೆಪಿ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ 'ಸೂರ್ಯ' ಅಲ್ಲ ಅಮಾವಾಸ್ಯೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಬಿಜೆಪಿಯವರು ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುತ್ತಾರೆ, ಮೀಸಲಾತಿ ನಿಲ್ಲಿಸುತ್ತೇವೆ ಎನ್ನುತ್ತಾರೆ. ಇವರಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ಇಲ್ಲ, ಸಂವಿಧಾನವನ್ನು ತಮ್ಮ ಮನೆಯ ಪೆಟ್ಟಿಗೆಯಲ್ಲಿ ಇಟ್ಟುಕೊಂಡಿರುವಂತೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ಈ ಬಾರಿ ಬಿಜೆಪಿಯು ಒಬ್ಬ ಹಿಂದುಳಿದವರಿಗೂ ಟಿಕೆಟ್ ನೀಡಿಲ್ಲ, ಆದರೆ ಕಾಂಗ್ರೆಸ್ ಎಲ್ಲ ಜಾತಿ, ಸಮುದಾಯದವರಿಗೂ ಅವಕಾಶ ನೀಡಿದೆ. ಬಿಜೆಪಿಯವರು ಕೋಮುವಾದಿಗಳು. ಅದರ ಆದಾರದಲ್ಲಿಯೇ ಚುನಾವಣೆ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ದೇಶಪ್ರೇಮಿಗಳು ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಾರೆ. ಆದರೆ ಬಿಜೆಪಿಯ ಯಾವೊಬ್ಬರೂ ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ. ಬಿಜೆಪಿಯವರು ಮಾತ್ರವೇ ದೇಶಪ್ರೇಮಿಗಳಾದರೆ ಉಳಿದವರೆಲ್ಲಾ ಏನು..?ಎಂದು ಪ್ರಶ್ನಿಸಿದರು.