ನವದೆಹಲಿ, ನ17(DaijiworldNews/PC): ಯಾರಿಗೆ ಗೊತ್ತು ಯಾರ ಅದೃಷ್ಟ ಯಾವಾಗ ಖುಲಾಯಿಸುತ್ತೆಂದು, ಹೌದು ಭಾರತದ ಮೂಲದ ವ್ಯಕ್ತಿಯೊಬ್ಬರಿಗೆ ಅದೃಷ್ಟ ಲಾಟರಿ ಹೊಡೆದಿದೆ.
ಹೌದು ಎಲ್ಲಾದರೂ ಲಾಟರಿ ಮಾರಾಟ ಮಾಡುತ್ತಿದ್ದರೆ ನಮ್ಮ ಬಳಿ ಅದನ್ನು ಕೊಳ್ಳುವ ಹಣ ಇಲ್ಲದಿದ್ದರೂ ಸಾಲ ಮಾಡಿಯಾದರೂ ಅದನ್ನು ತೆಗೆದುಕೊಂಡು ನಮ್ಮ ಅದೃಷ್ಟವನ್ನು ಪರೀಕ್ಷಿಸಿ ನೋಡೋಣ ಎಂದು ತೆಗೆದುಕೊಳ್ಳುತ್ತೇವೆ. ಆದರೆ ಭಾರತದ ಮೂಲದ ವ್ಯಕ್ತಿಗೆ ಅದೃಷ್ಟ ಲಾಟರಿ ಹೊಡೆದದ್ದು ದುಬೈ ನಲ್ಲಿ
ಅರಬ್ ರಾಷ್ಟ್ರ ಯುಎಇಯಾದ್ಯಂತ ವಾಸಿಸುತ್ತಿರುವ ಭಾರತೀಯರ ಪೈಕಿ ಕಳೆದೊಂದು ವಾರದಲ್ಲಿ ಸುಮಾರು ಐದು ಮಂದಿ ಲಾಟರಿ ಗೆಲ್ಲುವ ಮೂಲಕ ರಾತ್ರೋರಾತ್ರಿ ಸಿರಿವಂತರಾಗಿದ್ದಾರೆ.ಅದರಲ್ಲಿ ದುಬೈನ ಖಾಸಗಿ ಕಂಪನಿ ಒಂದರಲ್ಲಿ ತೈಲ ಮತ್ತು ಅನಿಲ ಉದ್ಯಮದ ನಿಯಂತ್ರಣ ಕೊಠಡಿಯಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿರುವ ಶ್ರೀಜು ಬುಧವಾರ ಪ್ರಕಟಗೊಂಡ ಲಾಟರಿ ಫಲಿತಾಂಶದಲ್ಲಿ 45 ಕೋಟಿ ರೂಪಾಯಿ ಗೆಲ್ಲುವ ಮೂಲಕ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.
ಉಳಿದಂತೆ ಕೇರಲ ಮೂಲದ ಶರತ್ ಶಿವದಾನಸ್ 11 ಲಕ್ಷ ರೂ., ಮುಂಬೈ ಮೂಲದ ಮನೋಜ್ ಭಾವಸಾರ್ 16 ಲಕ್ಷ ರೂ., ದೆಹಲಿ ಮೂಲದ ಅನಿಲ್ ಜಿಯಾಚಂದಾನಿ 10 ಲಕ್ಷ ರೂ., ಕಳೆದ ಎರಡು ವಾರಗಳಲ್ಲಿ ಗೆದ್ದಿರುವ ಲಾಟರಿ ಮೊತ್ತವಾಗಿದೆ. ಈ ಮೂಲಕ ಭಾರತೀಯರ ಅದೃಷ್ಟ ದುಬೈನಲ್ಲಿ ಹೊಡೆದಿದೆ.