ಲಕ್ನೋ, 15 (DaijiworldNews/PC): ದೆಹಲಿ-ದರ್ಭಾಂಗ ರೈಲಿನ ನಾಲ್ಕು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಎಂಟು ಮಂದಿ ಗಾಯಗೊಂಡಿ ಘಟನೆ ನಡೆದಿದೆ.
ಉತ್ತರ ಪ್ರದೇಶದ ಇಟಾವಾ ಬಳಿ ದೆಹಲಿ-ದರ್ಬಂಗಾ ಕ್ಲೋನ್ ಸ್ಪೆಷಲ್ನ ಎಸ್1 (ಸ್ಲೀಪರ್) ಕೋಚ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ರೈಲು ಸರಾಯ್ ಭೋಪಾಟ್ ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದಾಗ ಹೊಗೆ ಕಾಣಿಸಿಕೊಂಡು ಅವಘಡ ಸಂಭವಿಸಿದೆ.
ಕೋಚ್ ಒಂದಕ್ಕೆ ಭಾರಿ ಬೆಂಕಿ ಆವರಿಸಿದ ವೇಳೆ ಪ್ರಯಾಣಿಕರು ಮತ್ತು ಅಧಿಕಾರಿಗಳು ಸುತ್ತಲೂ ನಿಂತಿದ್ದರು. ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.ಗಾಯಗೊಂಡವರನ್ನು ಇಟಾವಾದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿ ಮಾಹಿತಿ ನೀಡಿದ್ದಾರೆ.