ಕಲಬುರಗಿ, ನ 15 (DaijiworldNews/HR): ಕೆಇಎ ಪರೀಕ್ಷಾ ಅಕ್ರಮದ ಆರೋಪಿ ಆರ್ ಡಿ ಪಾಟೀಲ್ ಅಲಿಯಾಸ್ ರುದ್ರಗೌಡ ಪಾಟೀಲ್ ನನ್ನು ಸಿಐಡಿ ವಶಕ್ಕೆ ಪಡೆದಿದ್ದು, ಮುಂದಿನ 8 ದಿನಗಳ ಕಾಲ ಸಿಐಡಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಡಿ ಪಾಟೀಲ್ ನನ್ನು ವಿಚಾರಣೆ ನಡೆಸಲಿದ್ದಾರೆ.
ನಗರದ ಅಶೋಕ್ ನಗರ ಪೊಲೀಸ್ ಠಾಣೆ, ಗುಲ್ಬರ್ಗ ಯುನಿವರ್ಸಿಟಿ ಪೊಲೀಸ್ ಠಾಣೆ, ಅಫಜಲಪುರ ಪೊಲೀಸ್ ಠಾಣೆ ಇಂದ ಬಂದಿಸಲ್ಪಟ್ಟಿರುವ ಎಲ್ಲಾ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಸಿಐಡಿ ಇಂದು ತನ್ನ ವಶಕ್ಕೆ ಪಡೆದಿದೆ.
ಇನ್ನು ಇದೇ ವೇಳೆ ಸಿಐಡಿ ಅಧಿಕಾರಿಗಳು ಪ್ರಕರಣ ತಮ್ಮ ವಶಕ್ಕೆ ಬಂದ ಬಳಿಕ ಓರ್ವ ಪರೀಕ್ಷಾ ಅಭ್ಯರ್ಥಿಯನ್ನು ಬುಧವಾರ ಬಂಧಿಸಿದ್ದು, ಬಂಧಿಸಿದ ವ್ಯಕ್ತಿಯ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.