ಮುಂಬೈ, ನ 14 (DaijiworldNews/AA): ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ದಾಖಲಿಸಿರುವ ಎಫ್ಐಆರ್ ನಲ್ಲಿ ಡಾಬರ್ ಗ್ರೂಪ್ ಅಧ್ಯಕ್ಷ ಮೋಹಿತ್ ಬರ್ಮನ್ ಹಾಗೂ ನಿರ್ದೇಶಕ ಗೌರವ್ ಬರ್ಮನ್ ಅವರ ಹೆಸರುಗಳಿವೆ ಎಂದು ವರದಿಯಾಗಿದೆ.
ಎಫ್ಐಆರ್ ನಲ್ಲಿ ಕೈಗಾರಿಕಾ ಉದ್ಯಮಿ ಮೋಹಿತ್ ಬರ್ಮನ್ ಅವರ ಹೆಸರಿನ ವಿರುದ್ದ ಉಲ್ಲೇಖಿಸಲಾಗಿರುವ ವಿಳಾಸವು ಫೋರ್ಟ್ ಮುಂಬೈನಲ್ಲಿದೆ. ಅಲ್ಲಿ ಅವರ ಹೂಡಿಕೆ ಕಂಪನಿ ಕಚೇರಿಯೊಂದು ಇದೆ ಎಂದು ಕಂಪನಿಗಳ ರಿಜಿಸ್ಟ್ರಾರ್ ಪ್ರಕಾರ ಉಲ್ಲೇಖ ಮಾಡಲಾಗಿದೆ.
ಈವರೆಗೆ ಮಹಾದೇವ ಬೆಟ್ಟಿಂಗ್ ಆಪ್ ಪ್ರಕರಣಕ್ಕೆ ಸಂಬಂಧಿಸಿ 31 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಬಣಕಾರ್ ನೀಡಿದ ದೂರಿನ ಆಧಾರದ ಮೇಲೆ ನವೆಂಬರ್ 7 ರಂದು ಎಫ್ಐಆರ್ ದಾಖಲಿಸಲಾಗಿತ್ತು. ಇದು ಮಹದೇವ್ ಆ್ಯಪ್ನ ಅಂಗಸಂಸ್ಥೆಗಳಲ್ಲಿ ಒಂದಾದ ಕಿಲಾಡಿ ಆಪ್ ವಿರುದ್ಧವಾಗಿತ್ತು ಎನ್ನಲಾಗಿದೆ.