ಚೆನ್ನೈ, ನ 13 (DaijiworldNews/HR): ತಮಿಳುನಾಡಿನ ರಾಣಿಪೇಟ್ ಜಿಲ್ಲೆಯ ಅಂಬಕ್ಕಂ ಪ್ರದೇಶದಲ್ಲಿ ಪಟಾಕಿ ಸಿಡಿದು ನಾಲ್ಕು ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.
ನಿಮಿಷಾ(4) ಮೃತ ಮಗು.
ಇನ್ನು ನಿಮಿಷಾ ತನ್ನ ತಂದೆ, ತಾಯಿಯೊಂದಿಗೆ ರಾಣಿಪೇಟೆಯ ತಮ್ಮ ಊರಿಗೆ ತೆರಳಿದ್ದು, ಈ ವೇಳೆ ನಿಮಿಷಾ ನೆರೆಹೊರೆಯ ಮಕ್ಕಳು ಜೊತೆ ಸೇರಿಕೊಂಡು ಪಟಾಕಿಗೆ ಬೆಂಕಿ ಹಚ್ಚಿ ಹಬ್ಬವನ್ನು ಆಚರಿಸುತ್ತಿದ್ದಳು. ಪಟಾಕಿ ಸಿಡಿಸುವಾಗ ಪಟಾಕಿಗಳು ಒಂದರ ನಂತರ ಒಂದರಂತೆ ಮಗುವಿನ ಮೇಲೆ ಬಿದ್ದಿದೆ. ಇದರಿಂದ ಮಗುವಿಗೆ ತೀವ್ರತರದ ಸುಟ್ಟಗಾಯಗಳಾಗಿವೆ. ಕೂಡಲೇ ಮಗುವನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಎದೆ ಮತ್ತು ಹೊಟ್ಟೆಯ ಭಾಗಗಳಾದ ಸುಟ್ಟಗಾಯಗಳಿಂದಾಗಿ ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ.
ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.