ಧಾರವಾಡ, ನ.12 (DaijiworldNews/SK): ಸಾಮಾನ್ಯವಾಗಿ ದೀಪಾವಳಿ ಹಬ್ಬವನ್ನು ಎಲ್ಲೆಡೆ ತಮ್ಮದೇ ಆದ ವಿಭಿನ್ನ ಸಂಪ್ರದಾಯದೊಂದಿಗೆ ಜನರು ಆಚರಿಸುತ್ತಾರೆ.
ಅದೇ ರೀತಿ ಈ ಹಿಂದೆ ಉತ್ತರ ಕರ್ನಾಟಕ ಭಾಗಗದಲ್ಲೂ ದೀಪಾವಳಿ ಸಮಯದಲ್ಲಿ ಜೂಜು ಆಡುವ ಸಂಪ್ರದಾಯವಿತ್ತು. ಬಳಿಕ ಇದನ್ನು ಸಂಪೂರ್ಣ ನಿಷೇಧಿಸಲಾಯಿತ್ತು .ಆದರೆ ನಿಷೇಧದ ನಡುವೆಯು ಜೂಜಾಟ ಆಡಿದ ಘಟನೆ ಧಾರವಾಡ ತಾಲೂಕಿನ ಗರಗದಲ್ಲಿ ನಡೆದಿದೆ.
ಪೊಲೀಸರು 3 ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿ ಶಿಂಗನಳ್ಳಿಯಲ್ಲಿ ನಾಲ್ವರು, ಕೊಟಬಾಗಿ ಹಾಗೂ ಲಕಮಾಪುರ ಗ್ರಾಮದಲ್ಲಿ ತಲಾ 8 ಜೂಜುಕೋರರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಒಟ್ಟು 24 ಸಾವಿರ ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.