ಜಾರ್ಖಂಡ್, ನ 12 (DaijiworldNews/AK): ವೇಗವಾಗಿ ಚಲಿಸುತ್ತಿದ್ದ ರೈಲು ದಿಡೀರ್ ಬ್ರೇಕ್ ಹಾಕಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದ ಘಟನೆ ಜಾರ್ಖಂಡದ ಕೊಡೆರ್ಮಾ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಶಾದ ಪುರಿಯಿಂದ ದೆಹಲಿಗೆ ಸಂಚರಿಸುತ್ತಿದ್ದ ಪುರುಷೋತ್ತಮ್ ಎಕ್ಸ್ಪ್ರೆಸ್ ರೈಲಿಗೆ ಶನಿವಾರ ಕೊಡರ್ಮಾ ಜಿಲ್ಲೆಯ ಪರ್ಸಾಬಾದ್ ಸಮೀಪ ವಿದ್ಯುತ್ ತಂತಿ
ತುಂಡಾದ ಪರಿಣಾಮ ಹಠಾತ್ತನೇ ವಿದ್ಯುತ್ ಸಂಚಾರ ಸ್ಥಗಿತಗೊಂಡಿತು.
ಈ ವೇಳೆ ತುರ್ತು ಬ್ರೇಕ್ ಹಾಕಿದ ಪರಿಣಾಮ ಜರ್ಕ್ನಿಂದಾಗಿ ಇಬ್ಬರು ಪ್ರಯಾಣಿಕರು ಮೃತಪಟ್ಟ ರು ಎಂದು ಧನ್ಬಾದ್ ರೈಲ್ವೆ ವಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ಸಮಯದಲ್ಲಿ ರೈಲು 130 ಕಿ.ಮೀ. ವೇಗದಲ್ಲಿ ಚಲಿಸುತ್ತಿತ್ತು ಎನ್ನಲಾಗುತ್ತಿದೆ.