ನವದೆಹಲಿ, ನ 12 (DaijiworldNews/AK): ಐಸಿಸ್ ಉಗ್ರಗಾಮಿ ಸಂಘಟನೆಯ ಜೊತೆ ನಂಟು ಹೊಂದಿರುವ ಆರೋಪದಡಿ ಅಲಿಘರ್ವಿಶ್ವವಿದ್ಯಾಲಯದ ಮೂವರು ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶ ಪೊಲೀಸ್ ಉಗ್ರ ನಿಗ್ರಹ ಪಡೆಯು ಬಂಧಿಸಿದೆ.
ಐಸಿಸ್ ನ ಅಲಿಗಢ ಘಟಕದೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇಲೆ ನೋಮನ್, ನಾಜಿಮ್ ಮತ್ತು ನಾವೇದ್ ಎಂಬ ಮೂವರನ್ನು ಬಂಧಿಸಲಾಗಿದೆ. ಈ ಮೂವರಿಂದ ಉಗ್ರ ಪ್ರಚೋದನಕಾರಿ ಬರಹಗಳೂ ಪತ್ತೆಯಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಬಂಧಿತ ಯುವಕರನ್ನು ಜೈಲಿಗೆ ಕಳುಹಿಸಲು ಎಟಿಎಸ್ ಕಾನೂನು ಕ್ರಮ ಕೈಗೊಳ್ಳುತ್ತಿದೆ.
ಈ ಹಿಂದೆ ಕೂಡ ಉತ್ತರ ಪ್ರದೇಶದ ಉಗ್ರ ನಿಗ್ರಹ ಪಡೆ ಅಲಿಘರ್ ನಲ್ಲಿ ಇಬ್ಬರು ಶಂಕಿತ ಭಯೋತ್ಪಾದಕರನ್ನು ಬಂಧಿಸಿತ್ತು.ಇಬ್ಬರೂ ಅಲಿಗಢಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು. ಇದರ ನಂತರ, ಐಸಿಸ್ ನ ಅಲಿಘರ್ ಮಾಡ್ಯೂಲ್ ಗೆ ಸಂಬಂಧಿಸಿದ ಉಳಿದ ಶಂಕಿತ ಭಯೋತ್ಪಾದಕರನ್ನು ಪತ್ತೆ ಹಚ್ಚಲು ಎಟಿಎಸ್ ಪ್ರಮುಖ ಕ್ರಮ ಕೈಗೊಂಡಿತ್ತು.