ಹುಬ್ಬಳ್ಳಿ ನ. 12 (DaijiworldNews/SK): ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರನ್ನು ಹೈಕಮಾಂಡ್ ನೇಮಕ ಮಾಡಿರುವುದು ಉತ್ತಮ ವಿಷಯ. ನೇಮಕ ಮಾಡಿರುವುದನ್ನು ನಾನು ಹರ್ಷದಿಂದ ಸ್ವಾಗತ ಮಾಡುತ್ತೇನೆ. ಬಿ.ವೈ. ವಿಜಯೇಂದ್ರ ಮೂರು ವರ್ಷ ಮಾತ್ರ ಅಧ್ಯಕ್ಷರಾಗಿರುತ್ತಾರೆ. ನಂತರ ಮತ್ತೊಬ್ಬ ಕಾರ್ಯಕರ್ತ ಅಧ್ಯಕ್ಷರಾಗುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾಡತಾಡಿದ ಅವರು ಹುರುಪಿನಿಂದ ಕೆಲಸ ಮಾಡುವ ಯುವಕರು ನಮ್ಮ ಪಕ್ಷಕ್ಕೆ ಅಗತ್ಯವಿತ್ತು ಅದೇ ರೀತಿ ಹೈಕಮಾಂಡ್ ಕೂಡ ಪ್ರಬಲ ನಾಯಕನನ್ನು ಆಯ್ಕೆ ಮಾಡಿದ್ದು, ಬಿವೈ ವಿಜಯೇಂದ್ರ ಅವರಿಗೆ ನಾವು ಎಲ್ಲ ಬೆಂಬಲ ಕೊಡುತ್ತೇವೆ. ಇನ್ನು ಕೆಲವೆ ದಿನಗಳಲ್ಲಿ ಲೋಕಸಭೆ ಚುನಾವಣೆ ಬರಲಿದ್ದು, ಈ ಚುನಾವಣೆಯಲ್ಲಿ 25 ಸ್ಥಾನವನ್ನು ಗೆಲ್ಲಬೇಕಾಗಿದೆ ಈ ಕೆಲಸವನ್ನು ವಿಜಯೇಂದ್ರ ನೇತೃತ್ವದಲ್ಲಿ ನಾವೆಲ್ಲ ಮಾಡುತ್ತೇವೆ ಎಂದರು.
ಇನ್ನು ಈ ಸ್ಥಾನವನ್ನು ಜಾತಿ ಆಧಾರದ ಮೇಲೆ ಕೊಟ್ಟಿರುವ ಹುದ್ದೆ ಅಲ್ಲ. ಬಿಎಸ್ ಯಡಿಯೂರಪ್ಪ ಅವರ ಬಳಿಕ ನಳೀನ್ ಕುಮಾರ್ ಕಟೀಲು ಅಧ್ಯಕ್ಷ ಸ್ಥಾನವಹಿಸಿದ್ದರು, ಇದೀಗ ಬಿ.ವೈ. ವಿಜಯೇಂದ್ರ ಅವರು ಮೂರು ವರ್ಷಗಳ ಕಾಲ ಎಲ್ಲ ಸಮುದಾಯದ ಬೆಂಬಲದೊಂದಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.