ಬೆಂಗಳೂರು, ನ 12 (DaijiworldNews/AK): ಬಡವರು, ಹೆಣ್ಣುಮಕ್ಕಳ ನೋವು ಕುಮಾರಸ್ವಾಮಿಗೆ ಗೊತ್ತಿಲ್ಲ. ಅವರು ಖುಷಿಯಿಂದ ಹಬ್ಬ ಆಚರಣೆ ಮಾಡುತ್ತಿದ್ದಾರೆ. ದಸರಾಗೆ ಬಂದಿದ್ದ ಜನರು ನೋಡಿದ್ರೆ ಗೊತ್ತಾಗುತ್ತೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಡಿಸಿಎಂ ಅವರು ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು.
ಬಳಿಕ ಗ್ಯಾರಂಟಿ ಯೋಜನೆಗಳ ಬಗ್ಗೆ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು. ಕುಮಾರಸ್ವಾಮಿಗೂ ಗ್ಯಾರಂಟಿಗಳಿಗೆ ಏನು ಸಂಬಂಧ..? ನಮ್ಮ ಗ್ಯಾರಂಟಿ ಬಗ್ಗೆ ಕುಮಾರಸ್ವಾಮಿಗೆ ಏನು ಗೊತ್ತಿದೆ. ಅವರೇನು ಫಲಾನುಭವಿನಾ ಎಂದು ಪ್ರಶ್ನಿಸಿದ ಅವರು, ಪಂಚರತ್ನ ಯೋಜನೆ ಇಂಪ್ಲಿಮೆಂಟ್ ಮಾಡಲು ಆಗಲಿಲ್ಲ. ಜನರಿಗೆ ತಲುಪಿದೇಯೋ ಇಲ್ಲ ಅಂತ ಮತದಾರರ ಕೇಳಬೇಕು ಎಂದು ತಿರುಗೇಟು ನೀಡಿದರು. ಕೇವಲ 5% ಮಾತ್ರ ಗೃಹಲಕ್ಷ್ಮೀ ತೊಂದರೆ ಆಗಿದೆ ಎಂದರು.
ತೆಲಂಗಾಣ ಚುನಾವಣೆಯಲ್ಲಿ ಆರು ಭರವಸೆ ನೀಡಿದ್ದೇವೆ. ಈ ಬಾರಿ ಕಾಂಗ್ರೆಸ್ಸಿಗೆ ಅಧಿಕಾರ ನೀಡಬೇಕು. ತೆಲಂಗಾಣ ಜನರು ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು.