ಮಧ್ಯಪ್ರದೇಶ, ಗುಜರಾತ್, ನ 11 (DaijiworldNews/AK): ಅನುಭವ್ ದುಬೆ 27 ವರ್ಷದ ಯುವ ಉದ್ಯಮಿ. 20ನೇ ವಯಸ್ಸಿನಲ್ಲಿ ವ್ಯಾಪಾರ ಮಾಡುತ್ತೇನೆ ಎಂದು ಹೊರಟಾಗ ಎಲ್ಲರೂ ಒಮ್ಮೆ ನಕ್ಕಿದ್ದರಂತೆ. ಆದರೆ ಈಗ ಅವರ ಯಶಸ್ಸನ್ನು ಕಂಡು ಎಲ್ಲರೂ ಅಚ್ಚರಿಗೊಂಡಿದ್ದಾರೆ. 20ನೇ ವಯಸ್ಸಿನಲ್ಲಿ ಕೇವಲ 3 ಲಕ್ಷದಲ್ಲಿ ಉದ್ಯಮ ಆರಂಭಿಸಿ ಇಂದು 150 ಕೋಟಿ ವ್ಯವಹಾರದ ಮುಖ್ಯಸ್ಥರಾಗಿ ಬೆಳೆದ ಅನುಭವ್ ದುಬೆ ಯಶಸ್ಸಿನ ಕಥೆ .
ಅನುಭವ್ ದುಬೆ ಮೂಲತಃ ಮಧ್ಯಪ್ರದೇಶದವರು. 2016 ರಲ್ಲಿ ಚಹಾ ಅಂಗಡಿಯನ್ನು ಪ್ರಾರಂಭಿಸಿದರು. ಅವರು "ಚಾಯ್ ಚುಚಾ ಬಾರ್" ಹೆಸರಿನಲ್ಲಿ ಟೀ ಅಂಗಡಿಯನ್ನ ತೆರೆದರು. ಈಗ ದೇಶಾದ್ಯಂತ ಸುಮಾರು 195 ಕ್ಕೂ ಹೆಚ್ಚು ನಗರಗಳಲ್ಲಿ ಅಂಗಡಿಗಳು ಕಾರ್ಯ ನಿರ್ವಹಿಸುತ್ತಿದೆ.
9 ರಿಂದ 6 ರವರೆಗೆ ಕಚೇರಿಯಲ್ಲಿ ಕೆಲಸ ಮಾಡುವುದಕ್ಕಿಂತ ವ್ಯಾಪಾರವನ್ನು ಪ್ರಾರಂಭಿಸುವುದು ಉತ್ತಮ ಎಂದು ಅಲೋಚಿಸಿದ ದುಬೆ, ಸ್ವಂತ ವ್ಯವಹಾರವನ್ನು ಕೈಗೆ ಎತ್ತಿಕೊಂಡು ಪ್ರಾರಂಭಿಸಿದರು. ಇದಕ್ಕೆ ಸ್ನೇಹಿತ ಬಿಕಾಂ ಪದವೀಧರ ಆನಂದ ನಾಯ್ಕ ಕೈಜೋಡಿಸಿದರು. ಉಳಿತಾಯ ಮಾಡಿಕೊಂಡಿದ್ದ ಒಂದೆರಡು ಲಕ್ಷ ಬಂಡವಾಳದಲ್ಲಿ ಟೀ ಅಂಗಡಿ ಆರಂಭಿಸಿದರು. ಇತರ ಚಹಾ ಅಂಗಡಿಗಳಿಗೆ ಹೋಲಿಸಿದರೆ, ದುಬೆ ಮಣ್ಣಿನ ಲೋಟಗಳಲ್ಲಿ ಚಹಾವನ್ನು ನೀಡುವ ಮೂಲಕ ಎಲ್ಲರನ್ನು ಆಕರ್ಷಿಸಿತ್ತು.
ಅವರ ಅಂಗಡಿಯಲ್ಲಿ ಧೂಮಪಾನಕ್ಕೆ ಅವಕಾಶವಿಲ್ಲ ಅನ್ನುವುದು ಮತ್ತೊಂದು ವಿಶೇಷ ಅನೇಕ ಕೋಚಿಂಗ್ ಸೆಂಟರ್ ಹಾಗೂ ಲೇಡೀಸ್ ಹಾಸ್ಟೆಲ್ ಬಳಿಯೇ ಮೊದಲ ಅಂಗಡಿ ನಿರ್ಮಿಸಿದ್ದರು. ಆ ಅಂಗಡಿ ನಾಮಫಲಕಕ್ಕೂ ಹಣವಿಲ್ಲದೆ, ಚಾಯ್ ಚುಚಾ ಬಾರ್ ಅನ್ನು ಕೈಯಿಂದ ಬರೆದು ವ್ಯಾಪಾರ ಶುರು ಮಾಡಿದರು. ನಂತರ ವ್ಯಾಪಾರ ಕ್ರಮೇಣ ಹೆಚ್ಚಾಯಿತು. ಈಗ ಚಾಯ್ ಚುಚಾ ಬಾರ್ ಅಂಗಡಿಯಲ್ಲಿ 20 ವಿಧದ ಚಹಾಗಳು ಲಭ್ಯವಿವೆ. ಅವರ ಕಠಿಣ ಪರಿಶ್ರಮದಿಂದಾಗಿ ವ್ಯಾಪಾರವು ಕ್ರಮೇಣ ವಿಸ್ತರಿಸಿತು. ಕೆಲವೇ ವರ್ಷಗಳಲ್ಲಿ, ಅಂಗಡಿಗಳ ಸಂಖ್ಯೆ 195 ಕ್ಕೂ ಹೆಚ್ಚು ನಗರಗಳಲ್ಲಿ ಮಳಿಗೆಗಳನ್ನು ತೆರೆದಿದ್ದಾರೆ.
ಭಾರತ ಮಾತ್ರವಲ್ಲ, ದುಬೈನಲ್ಲೂ ಚಾಯ್ ಚುಚಾ ಬಾರ್ ಅಂಗಡಿಗಳಿವೆ. ಪ್ರಸ್ತುತ 'ಚಾಯ್ ಚುಚಾ ಬಾರ್' ಭಾರತದಲ್ಲಿ ಪ್ರಮುಖ ಚಹಾ ಅಂಗಡಿ ಫ್ರಾಂಚೈಸ್ ಆಗಿದೆ. ಇಲ್ಲಿ ಬಳಸುವ ಮಣ್ಣಿನ ಗ್ಲಾಸ್ಗಳನ್ನು ಸ್ಥಳೀಯ ಕುಂಬಾರರಿಂದ ಖರೀದಿಸಲಾಗುತ್ತದೆ. ಸುಮಾರು 250 ಕುಂಬಾರ ಕುಟುಂಬಗಳು ಇದರ ಪ್ರಯೋಜನ ಪಡೆಯುತ್ತಿವೆ.
ಕಂಪನಿಗೆ ಸುಮಾರು 150 ಕೋಟಿ ಆದಾಯ ಬಂದಿದೆ. ಚಹಾದ ಮೇಲಿನ ಅಪಾರ ಉತ್ಸಾಹವನ್ನು ವ್ಯಾಪಾರವಾಗಿ ಪರಿವರ್ತಿಸಿದೆವು, ಅದು ಚೆನ್ನಾಗಿ ಕೆಲಸ ಮಾಡಿದೆ. 27ರ ಹರೆಯದಲ್ಲಿ 150 ಕೋಟಿ ಆಸ್ತಿಯ ಮುಖ್ಯಸ್ಥರಾಗಿರುವ ಅನುಭವ್ ಇಂದಿನ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.