ಬೆಂಗಳೂರು, ನ 11 (DaijiworldNews/HR): ಕೆಇಎ ಪರೀಕ್ಷೆ ಅಕ್ರಮವನ್ನು ಸಿಐಡಿ ತನಿಖೆಗೆ ನೀಡುವುದಾಗಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪರೀಕ್ಷೆ ಅಕ್ರಮದ ಕಿಂಗ್ ಪಿನ್ ಆರ್ಡಿ ಪಾಟೀಲ್ ಬಂಧನವಾಗಿದ್ದು, ಕೆಲಸದಲ್ಲಿ ಎರಡು ಮೂರು ಟೀಮ್ ಮಾಡಿ ಇಲಾಖೆಯವರು ಹಿಡಿದಿದ್ದಾರೆ ಎಂದರು.
ಇನ್ನು ಬಹಳ ಬೇಗ ಆರೋಪಿಯನ್ನು ಬಂಧಿಸಿದ್ದಕ್ಕೆ ಇಲಾಖೆಗೆ ಅಭಿನಂದನೆಗಳು. ಆರ್ಡಿ ಪಾಟೀಲ್ ಮೇಲೆ 5-6 ಕೇಸ್ಗಳಿವೆ. ಪಿಎಸ್ಐ ಸೇರಿದಂತೆ ಎಲ್ಲಾ ಪ್ರಕರಣಗಳನ್ನು ಸಿಐಡಿಗೆ ನೀಡಬೇಕೆಂದು ನಾವು ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.