ಹೈದರಾಬಾದ್,ನ 11 (DaijiworldNews/PC): ಸಾಮಾನ್ಯವಾಗಿ ರಾಜಕೀಯ ನಾಯಕರು ಅಥವಾ ವಿವಿಧ ಪ್ರಸಿದ್ದ ವ್ಯಕ್ತಿಗಳು ಬರುವ ಸಂಧರ್ಭದಲ್ಲಿ ವಿವಿಧ ಜನರು ವಿವಿಧ ರೀತಿಯಲ್ಲಿ ತಮ್ಮನ್ನು ಗುರುತಿಸಬೇಕು ಎನ್ನುವ ಉದ್ದೇಶದಿಂದ ವಿವಿಧ ರೀತಿಯ ಹರಸಾಹಸ ವನ್ನು ಮಾಡುತ್ತಾರೆ ಇಂತಹದ್ದೇ ಒಂದು ಘಟನೆ ಇಲ್ಲಿದೆ.
ಹೈದರಾಬಾದ್ ನ ಸಿಕಂದರಬಾದ್ ನಲ್ಲಿ ಪ್ರಧಾನಿ ಮೋದಿಯವರು ಚುನಾವಣಾ ಪ್ರಚಾರಕ್ಕಾ ತೆರಳಿದ್ದಾಗ ಯುವತಿಯೊಬ್ಬಳು ಪ್ರಧಾನಿಯ ಗಮನವನ್ನು ಸೆಳೆಯಲು ಲೈಟಿನ ಟವರ್ ಅನ್ನು ಏರಿದ್ದರು ಇದು ಅಲ್ಲಿ ನೆರೆದಿದ್ದ ಜನರಲ್ಲಿ ಭಯವನ್ನು ಸೃಷ್ಟಿಮಾಡಿತು.
ಪ್ರಧಾನಿ ಮೋದಿಯೊಂದಿಗೆ ಮಾತನಾಡಬೇಕೆಂದು ಯುವತಿ ಮೈದಾನದಲ್ಲಿ ಹಾಕಲಾಗಿದ್ದ ಲೈಟ್ ಟವರ್ ಮೇಲೆ ಹತ್ತಿದ್ದಾಳೆ. ಈ ಯುವತಿಯನ್ನು ನೋಡಿದ ಪ್ರಧಾನಿ ತಕ್ಷಣ ಜೀವಕ್ಕೆ ಅಪಾಯವಾಗಬಹುದು ಎಂದು ಹೇಳಿ ಕೆಳಗೆ ಇಳಿಯುವಂತೆ ಪದೇ ಪದೇ ವಿನಂತಿಸಿದರು.
ನಾವು ನಿಮ್ಮೊಂದಿಗಿದ್ದೇವೆ, ಆದರೆ ಇದು ಸರಿಯಲ್ಲ, ದಯವಿಟ್ಟು ಕೆಳಗೆ ಇಳಿಯಿರಿ, ನಾನು ನಿನ್ನ ಮಾತನ್ನು ಕೇಳುತ್ತೇನೆ ಎಂದು ಹೇಳಿದರು. ಅದು ಶಾರ್ಟ್ ಸರ್ಕಿಟ್ ಆಗುವ ಸ್ಥಳ, ದಯವಿಟ್ಟು ಕೆಳಗೆ ಇಳಿಯಿರಿ. ಹೀಗೆ ಮಾಡುವುದರಿಂದ ಏನು ಪ್ರಯೋಜವಿಲ್ಲ, ನಾನು ನಿಮಗಾಗಿ ಇಲ್ಲಿಗೆ ಬಂದಿದ್ದೇನೆ. ಎಂದು ಪ್ರಧಾನಿ ಮೋದಿ ಯುವತಿಗೆ ಹೇಳಿದರು. ಆ ಬಳಿಕ ಯುವತಿ ಟವರ್ ಮೇಲಿಂದ ಕೆಳಗೆ ಇಳಿದರು.