ಹಾಸನ, ನ 11 (DaijiworldNews/PC): ವೈದ್ಯರ ಸಲಹೆ ಇಲ್ಲದೇ ಔಷಧವನ್ನು ಮಾರಾಟ ಮಾರುವವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಹಾಸನ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಸುರಕ್ಷಾ ಗರ್ಭಪಾತ ದಿನ, ಸುರಕ್ಷಿತ ಗರ್ಭಪಾತ ಸೇವೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು ಮಹಿಳೆಯರು ಗರ್ಭಪಾತಕ್ಕೆ ನೇರವಾಗಿ ಮೆಡಿಕಲ್ ಸ್ಟೋರ್ಗಳಿಂದ ಔಷಧ ಪಡೆದು ಗರ್ಭಪಾತಕ್ಕೆ ಯತ್ನಿಸುವುದರಿಂದ ಸಾವುಗಳು ಸಂಭವಿಸುತ್ತಿವೆ. ಆದರೂ ಔಷಧ ವ್ಯಾಪಾರಿಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಯಾವುದೇ ವೈದ್ಯರ ಸಲಹೆಯನ್ನೂ ಪಡೆಯದೇ ಔಷಧ ಅಂಗಡಿಗಳಲ್ಲಿ ನೇರವಾಗಿ ಔಷಧ ಮಾರಾಟವನ್ನು ನಿಯಂತ್ರಿಸುವ ಸಂಬಂಧ ಡ್ರಗ್ಸ್ ಕಂಟ್ರೋಲ್ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಗುಂಡೂರಾವ್ ತಿಳಿಸಿದರು.