ಮಣಿಪುರ, ನ 11 (DaijiworldNews/PC): ಮಣಿಪುರದ ಇಂಫಾಲ್ ನ ಅವಾಂಗ್ ಲೈಕೈನಿಂದ ಇಬ್ಬರು ಯುವಕರು ನಾಪತ್ತೆಯಾದ ಘಟನೆ ನಡೆದಿದೆ. ಈ ಘಟನೆ ಬಳಿಕ ಜಂಟಿ ಕ್ರಿಯಾ ಸಮಿತಿ ಶುಕ್ರವಾರ ನೀಡಿರುವ 33 ಗಂಟೆಗಳ ರಾಜ್ಯವ್ಯಾಪ್ತಿ ಬಂದ್ ಅನ್ನು ಘೋಷಿಸಲಾಗಿದೆ. ಈ ಬಂದ್ ನಿಂದಾಗಿ ಮಣಿಪುರದ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ಥವಾಗಿದೆ.
ಬಂದ್ ಮಾಡಿ ಕಾಣೆಯಾದ ಇಬ್ಬರು ಯುವಕರನ್ನು ಪತ್ತೆಹಚ್ಚಲು ವಿಫಲರಾದ ಕಾರಣ ಬಂದ್ ಅನ್ನು ಶುಕ್ರವಾರ ಮದ್ಯಾಹ್ನದ ವರೆಗೆ ಇದ್ದ ಬಂದ್ ಅನ್ನು ಶನಿವಾರ ಮಧ್ಯಾಹ್ನ 1 ಗಂಟೆಯವರೆಗೂ ವಿಸ್ತರಿಸಲಾಯಿತು.
ಜೆ ಎ ಸಿ ಸಂಸ್ಥೆಯು ಅವಧಿ ಮುಗಿಯುವ ಮೊದಲು ಬಾಲಕರನ್ನು ಪತ್ತೆಹಚ್ಚದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂಬುದಾಗಿ ಎಚ್ಚರಿಕೆಯನ್ನು ನೀಡಿದೆ.ಜೆ ಎ ಸಿ ಸಂಸ್ಥೆಯು ವಿದ್ಯಾರ್ಥಿ ಸಂಸ್ಥೆಗಳು ಮತ್ತು ಸಾರ್ವಜನಿಕರ ಬೆಂಬಲಿತ ಸಂಸ್ಥೆಯಾಗಿದೆ.
ಈ ಯುವಕರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಿದ ಬಂದ್ ನಿಂದಾಗಿ ಶಿಕ್ಷಣ ಸಂಸ್ಥೆಗಳು, ಖಾಸಗಿ ಕಚೇರಿಗಳು, ಬ್ಯಾಂಕ್ ಗಳು, ಪೆಟ್ರೋಲ್ ಪಂಪ್, ಹಾಗೂ ಬಹುತೇಕ ಸಂಸ್ಥೆಗಳು ಬಂದ್ ಆಗಿದ್ದು ರಸ್ತೆಗಳು ಜನರಹಿತವಾಗಿತ್ತು.