ದೆಹಲಿ, ನ 11 (DaijiworldNews/HR): ಕರ್ನಾಟಕದಲ್ಲಿ ಪೂರ್ತಿ ಗುಡಿಸಿ ಸಾರಿಸಿದ ನಂತರ ಇದೀಗ ಬಿಜೆಪಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸುರ್ಜೇವಾಲಾ, ಮಗನನ್ನು ನಿಯೋಜಿಸುವ ಬಗ್ಗೆ ಹೇಳುವಾಗ ನೆನಪಿಗೆ ಬಂತು ಬಿಜೆಪಿಯ ಸ್ವಜನಪಕ್ಷಪಾತದ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ ಎಂಬುದು. ಕರ್ನಾಟಕದಲ್ಲಿ ಪೂರ್ತಿ ಗುಡಿಸಿ ಸಾರಿಸಿದ ನಂತರ ಇದೀಗ ಬಿಜೆಪಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ. ಆದರೆ ಮೋದಿ ಜೀ ಮತ್ತು ಅಮಿತ್ ಶಾ ತಮ್ಮ ಭಾಷಣದಲ್ಲಿ ಬಡಾಯಿ ಬಿಡುತ್ತಲೇ ಇರುತ್ತಾರೆ ಎಂದರು.
ಇನ್ನು ಈಗ ದೇಶದ ಜನತೆ ಸುಳ್ಳು, ಲೂಟಿ, ವಂಚನೆಯಿಂದ ಕೂಡಿರುವ ಬಿಜೆಪಿಯನ್ನು ಸಂಪೂರ್ಣವಾಗಿ ಅಸಮಾಧಾನಗೊಳಿಸಿ ಹೊರಹಾಕಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.