ಹೊಸದಿಲ್ಲಿ, ಎ.15(AZM):ಆದಿತ್ಯನಾಥ್ ಹಾಗೂ ಮಾಯಾವತಿಯವರಿಗೆ ಚುನಾವಣಾ ಪ್ರಚಾರದಿಂದ ಆಯೋಗವು ನಿಷೇಧ ಹೇರಿದ ಬೆನ್ನಲ್ಲೇ ಅಝಂ ಖಾನ್ ಮತ್ತು ಕೇಂದ್ರ ಸಚಿವ ಮೇನಕಾ ಗಾಂಧಿಯವರಿಗೆ ಚುನಾವಣಾ ಆಯೋಗವು ನಿಷೇಧ ಹೇರಿದೆ.
ಚುನಾವಣಾ ಪ್ರಚಾರದ ವೇಳೆ ವಿವಾದಾತ್ಮಕ ಹೇಳಿಕೆ ನೀಡುವ ರಾಜಕೀಯ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನಲೆ ಇದೀಗ ಚುನಾವಣಾ ಪ್ರಚಾರದಿಂದ ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್ ಮತ್ತು ಕೇಂದ್ರ ಸಚಿವ ಮೇನಕಾ ಗಾಂಧಿಗೆ ಚುನಾವಣಾ ಆಯೋಗವು ನಿಷೇಧ ಹೇರಿದೆ.
ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್ ರಿಗೆ ಚುನಾವಣಾ ಪ್ರಚಾರದಿಂದ 72 ಗಂಟೆಗಳ ಕಾಲ, ಮೇನಕಾ ಗಾಂಧಿಗೆ 48 ಗಂಟೆಗಳ ಕಾಲ ಚುನಾವಣಾ ಆಯೋಗ ನಿಷೇಧ ಹೇರಿದೆ.