ಬೆಂಗಳೂರು ನ, 8 (DaijiworldNews/RA): ನವೆಂಬರ್ ನ ತಿಂಗಳ ಒಳಗೆ ಜಾತಿ ಜನಗಣತಿ ವರದಿ ಬಿಡುಗಡೆ ಮಾಡದಿದ್ರೆ ಸಿದ್ದರಾಮಯ್ಯಗೆ ಸಾಧು ಸಂತರ ಶಾಪ ತಟ್ಟುತ್ತದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ವರದಿ ನವೆಂಬರ್ ಒಳಗೆ ಬಿಡುಗಡೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ 1001ನೇ ಸಲ ಹೇಳಿದ್ದಾರೆ.
ಹಿಂದುಳಿದ, ದಲಿತ ಮಠಾಧಿಪತಿಗಳ ಒಕ್ಕೂಟಕ್ಕೆ ನವೆಂಬರ್ನಲ್ಲಿ ಬಿಡುಗಡೆ ಮಾಡ್ತೀನಿ ಅಂತಾ ಭರವಸೆ ನೀಡಿದ್ದಾರೆ.ಇತ್ತ ಅವರ ಪಕ್ಷದಲ್ಲಿ ನಾನೇ ಸಿಎಂ ಅಂತ ಎಂದು ಹೇಳಿಕೊಳ್ಳುವವರ ಸಂಖ್ಯೆ ವೋಟರ್ ಲಿಸ್ಟ್ ನಂತೆ ಬೆಳೆಯುತ್ತಾ ಇದೆ.ಸರ್ಕಾರದಲ್ಲಿ ಸಿದ್ದರಾಮಯ್ಯ, ಡಿಕೆಶಿ ಇಬ್ಬರೇ ಅತಿ ಹೆಚ್ಚು ಲೂಟಿ ಹೊಡೆಯುತ್ತಿರುವುದು.ಎಲ್ಲ ಮಂತ್ರಿಗಳೂ ಇವರಿಬ್ಬರ ಲೂಟಿ ನೋಡಿ ಕಣ್ ಕಣ್ ಬಿಡ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದರು.ಈ ಸರ್ಕಾರ ಬಹಳ ದಿನ ಇರಲ್ಲ, ಹಾಳಾಗಿ ಹೋಗುತ್ತದೆ ಎಂದು ರಾಜ್ಯ ಸರಕಾರ ವಿರುದ್ಧ ಕಿಡಿ ಕಾರಿದರು.