ನವದೆಹಲಿ, ನ 6 (DajiiworldNews/PC): ಸಾಧಿಸುವ ಛಲವಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಮಾತಿನಂತೆ ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ಹಾಗೂ ಆಪ್ತ ಮಿತ್ರನ ದ್ರೋಹ ಇವೆರಡನ್ನೂ ಮೆಟ್ಟಿನಿಂತು UPSC ಪರೀಕ್ಷೆಯಲ್ಲಿ ತೇರ್ಗಡೆಗೊಂಡ ನಿರೀಶ್ ರಜಪೂತ್ ಅವರ ಯಶಸ್ಸಿನ ಕಥೆ.
ನಿರೀಶ್ ರಜಪೂತ್ ಅವರು ಮಧ್ಯಪ್ರದೇಶ ತೀರಾ ಬಡಕುಟುಂಬದಲ್ಲಿ ಜನಿಸಿದರು. ಇವರ ತಂದೆ ಟೈಲರ್ ವೃತ್ತಿಯನ್ನು ಮಾಡುತ್ತಿದ್ದರೆ, ಇವರ ಇಬ್ಬರು ಅಣ್ಣಂದಿರು ಶಿಕ್ಷಕರಾಗಿ ವೃತ್ತಿ ಜೀವನವನ್ನು ಮಾಡುತ್ತಿದ್ದರು. ಕುಟುಂಬದಲ್ಲಿ ಆರ್ಥಿಕ ಸಂಕಷ್ಟಗಳು ಇದ್ದರೂ ನಿರೀಶ್ ಅವರಿಗೆ ಐ ಎ ಎಸ್ ಆಗುವ ಬಯಕೆ ಹೊಂದಿದ್ದರು. ಅದೆಷ್ಟೇ ಆರ್ಥಿಕ ಪರಿಸ್ಥಿತಿಗಳು ಅವರನ್ನು ಕುಗ್ಗಿಸಿದರೂ ಅವರ ಕುಟುಂಬದವರು ಎಲ್ಲಾ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಅವರ ಶಿಕ್ಷಣಕ್ಕೆ ಸಹಕರಿಸಿದರು.
ಬಾಲ್ಯದಿಂದಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ಬುತ ಸಾಧನೆಗೈದ ರಜಪೂತ್ ರಿಗೆ ಇವರ ಗೆಳೆಯ ಒಂದು ಸಿವಿಲ್ ಸರ್ವೀಸಸ್ ಪರೀಕ್ಷೆಗಳಿಗೆ ಕೋಚಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಶಿಕ್ಷಕ ಸ್ಥಾನವನ್ನು ನೀಡಿದರು. ಪ್ರತಿಯಾಗಿ ಅಧ್ಯಯನ ಸಾಮಗ್ರಿಗಳನ್ನು ಒದಗಿಸುವ ಭರವಸೆ ನೀಡಿದರು. ತನ್ನ ಗೆಳೆಯನನ್ನು ನಂಬಿ ಸುಮಾರು ಎರಡು ವರ್ಷಗಳನ್ನು ಸಂಸ್ಥೆಗೆ ಮೀಸಲಿಟ್ಟು ತನ್ನ ಕಠಿಣ ಪರಿಶ್ರಮದ ಮೂಲಕ ಅದರ ಬೆಳವಣಿಗೆಗೆ ಕೊಡುಗೆ ನೀಡಿದರು. ಸಂಸ್ಥೆ ಯಶಸ್ಸನ್ನು ಸಾಧಿಸಿದ ನಂತರ ಅವರ ಸ್ನೇಹಿತ ಅವರನ್ನು ವಜಾಗೊಳಿಸಿದಾಗ ಅವರು ಅಂತಿಮವಾಗಿ ದ್ರೋಹ ಬಗೆದನು.
ತನ್ನ ಗೆಳೆಯ ಕೊಟ್ಟ ಮಾತಿಗೆ ತಪ್ಪಿ ದ್ರೋಹ ಬಗೆದರೂ ಕುಗ್ಗದ ರಜಪೂತ್ ಅದನ್ನೇ ಪಾಠವೆಂದು ತಿಳಿದುಕೊಂಡು ತನ್ನ ಮನದ ನೋವನ್ನು ಲೆಕ್ಕಿಸದೇ ದೆಹಲಿಗೆ ಹೊರಡುವ ನಿರ್ಧಾರವನ್ನು ಮಾಡಿದರು. ತನ್ನ ಪರೀಕ್ಷೆಯ ತಯಾರಿಯನ್ನು ಮುಂದುವರಿಸಲು ಇನ್ನೊಬ್ಬ ಸ್ನೇಹಿತನಿಂದ ಅಧ್ಯಯನ ಸಾಮಗ್ರಿಗಳನ್ನು ಸಾಲವನ್ನು ಪಡೆದನು. ದೆಹಲಿಯಲ್ಲಿ ಅದೆಷ್ಟೇ ಕಷ್ಟಗಳು ಎದುರಾದರೂ ಈತನು ಸಮಯವನ್ನು ಶ್ರದ್ಧೆಯಿಂದ ನಿರ್ವಹಿಸಿದರು. ಯಾವುದೇ ವೃತ್ತಿಪರ ಕೋಚಿಂಗ್ ಇಲ್ಲದೆ, ಅವರು ಸ್ವತಃ UPSC ಪರೀಕ್ಷೆಗಳಿಗೆ ತಯಾರಿ ಆರಂಭಿಸಿದರು.
ಮೊದಲ ಮೂರು ಯತ್ನಗಳಲ್ಲಿ ವಿಫಲವಾಗಿದ್ದರೂ, ಅವರು ಪರಿಶ್ರಮ ಪಟ್ಟರು. ಅವರ ದೃಢ ನಿರ್ಧಾರವು ಅಂತಿಮವಾಗಿ ಫಲ ನೀಡಿತು ಮತ್ತು ಅವರು UPSC ಪರೀಕ್ಷೆಯಲ್ಲಿ ಅಖಿಲ ಭಾರತ 370 ರ ರ್ಯಾಂಕ್ ಗಳಿಸಿದರು. ಜೀವನದಲ್ಲಿ ಕಠಿಣ ಪರಿಶ್ರಮ, ಸಮರ್ಪಣೆಯು ಕಠಿಣ ಸವಾಲುಗಳನ್ನು ಸಹ ಜಯಿಸಬಹುದು ಎಂದು ಸಾಬೀತುಪಡಿಸಿದರು. ಈ ಮೂಲಕ ತಮ್ಮ ಗುರಿಯನ್ನು ಸಾಧಿಸಲು ಆರ್ಥಿಕ ಸಂಕಷ್ಟ ಅಥವಾ ಯಾರು ದ್ರೋಹವನ್ನು ಬಗೆದರೂ ಇದೆಲ್ಲವನ್ನು ಮೆಟ್ಟುನಿಂತು ತಮ್ಮ ಗುರಿಯನ್ನು ಸಾಧಿಸಬಹುದು ಎಂಬುದನ್ನು ತಿಳಿಸಿದ್ದಾರೆ.