ಚಿಕ್ಕಮಗಳೂರು, ಎ15(SS): ಸಾಲು ಸಾಲು ಬಿಜೆಪಿ ನಾಯಕರು ಜೈಲಿಗೆ ಹೋಗಿ ಬಂದು ಈಗ ನಾವು ಚೌಕಿದಾರ್ ಅಂತ ಹೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈಲಿಗೆ ಹೋಗಿ ಬಂದವರೆಲ್ಲಾ ಚೌಕಿದಾರ್ಗಳಾದರೆ ನಾವು ಏನು ಆಗಬೇಕು..? ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ, ಜನಾರ್ದನ ರೆಡ್ಡಿ- ಹೀಗೆ ಸಾಲು ಸಾಲು ಬಿಜೆಪಿ ನಾಯಕರು ಜೈಲಿಗೆ ಹೋಗಿ ಬಂದು ಈಗ ನಾವು ಚೌಕಿದಾರ್ ಅಂತ ಹೇಳುತ್ತಿದ್ದಾರೆ. ಹಾಗಾದ್ರೆ ನಾವು ಏನು ಹೇಳಬೇಕು..? ಎಂದು ಪ್ರಶ್ನಿಸಿದ್ದಾರೆ.
ಆದಾಯ ತೆರಿಗೆ ಅಧಿಕಾರಿಗಳು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹಾಗೂ ಅವರಿಗೆ ಸಂಬಂಧಿಸಿದ ಗುತ್ತಿಗೆದಾರರ ಮೇಲೆ ಮಾತ್ರ ಯಾಕೆ ದಾಳಿ ಮಾಡುತ್ತಾರೆ..? ಯಡಿಯೂರಪ್ಪ, ಶೋಭಾ, ಸಿ.ಟಿ. ರವಿ ಮನೆ ಮೇಲೆ ಯಾಕೆ ರೈಡ್ ಮಾಡಿಲ್ಲ…? ಬಿಜೆಪಿ ಪಕ್ಷದ ಇವರೆಲ್ಲಾ ಸತ್ಯಹರಿಶ್ಚಂದ್ರರೆ..? ನಿಮಗೆ ಜೆಡಿಎಸ್ ಹಾಗೂ ಕಾಂಗ್ರೆಸ್ನವರೇ ಕಾಣೋದಾ ದಾಳಿ ಮಾಡೋಕೆ…? ಎಂದು ಕೇಳಿದ್ದಾರೆ.
ಚುನಾವಣೆ ಮುಗಿದ ಮೇಲೆ ದಾಳಿ ಮಾಡಿ. ನಾವು ಕಾನೂನಿಗೆ ಬೆಲೆ ಕೊಡುತ್ಥೆವೆ. ಆದರೆ ಕಾನೂನು ಯಾರೂ ದುರುಪಯೋಗ ಪಡಿಸಿಕೊಳ್ಳಬಾರದು ಎಂದು ತಿಳಸಿದರು.