ಪಶ್ಚಿಮ ಬಂಗಾಳ, ನ 02 (DaijiworldNews/SK): ಪಶ್ಚಿಮ ಬಂಗಾಳ ಮೂಲದ 23ರ ಹರೆಯದ ತಮಾಲಿ ಸಾಹಾ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಪರೀಕ್ಷೆಯಲ್ಲಿ ತನ್ನ ಮೊದಲ ಪ್ರಯತ್ನದಲ್ಲಿಯೇ ತೇರ್ಗಡೆಯಾಗಿದ್ದಾರೆ. ಈ ಮೂಲಕ ಅಚಲವಾದ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಸರಿಯಾದ ಕಾರ್ಯತಂತ್ರದೊಂದಿಗೆ, ಸಾಧನೆಯ ಶಿಖರವೇರಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣದವಾಗಿರುವ ಸಾಹಾ ಪ್ರಾಥಮಿಕ ಶಿಕ್ಷಣ ತನ್ನೂರಿನಲ್ಲಿ ಪೂರೈಸಿ, ಕೋಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆದರು. ಪದವಿ ಓದುವ ವೇಳೆಯಲ್ಲೇ UPSC ಪರೀಕ್ಷೆಎದುರಿಸಬೇಕೆನ್ನುವ ದೃಢಸಂಕಲ್ಪವಿತ್ತು.
2020ರಲ್ಲಿ ತನ್ನ ಚೊಚ್ಚಲ ಪ್ರಯತ್ನದಲ್ಲಿ UPSC ಭಾರತೀಯ ಅರಣ್ಯ ಸೇವಾ ಪರೀಕ್ಷೆಯನ್ನು ಯಶಸ್ವಿಯಾಗಿ ಉತ್ತೀರ್ಣಗೊಳಿಸಿದಾಗ ಆಕೆಯ ಗುರಿಗೆ ಆಕೆಯ ಪಟ್ಟುಬಿಡದ ಬದ್ಧತೆಯು ಫಲ ನೀಡಿತು. 94 ನೇ ರ್ಯಾಂಕ್ ಗಳಿಸುವ ಸಾಹಾರನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿಯಾಗಿ ನೇಮಿಸಲಾಯಿತು.
ಈ ನಿಟ್ಟಿನಲ್ಲಿ ಇವರ ಪಯಣವು, ನಾಗರಿಕ ಸೇವಕರಾಗಿ ಸೇವೆ ಸಲ್ಲಿಸುವ ಕನಸು ಕಾಣುವ ಅಸಂಖ್ಯಾತ ಆಕಾಂಕ್ಷಿಗಳಿಗೆ ಸ್ಫೂರ್ತಿ ನೀಡಿದೆ.