ದೆಹಲಿ, ನ.1 (DaijiworldNews/AA): ಪೈಲಟ್ಗಳು ಮತ್ತು ಸಿಬ್ಬಂದಿ ಸದಸ್ಯರು ಮೌತ್ವಾಶ್, ಟೂತ್ ಜೆಲ್ ಅಥವಾ ಆಲ್ಕೋಹಾಲ್ ಅಂಶವನ್ನು ಹೊಂದಿರುವ ಯಾವುದೇ ವಸ್ತುವನ್ನು ಬಳಸುವಂತಿಲ್ಲ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಪರಿಷ್ಕೃತ ಮಾನದಂಡ ಹೊರಡಿಸಿದೆ.
ಆಲ್ಕೋಹಾಲ್ ಸೇವನೆಗಾಗಿ ವಿಮಾನ ಸಿಬ್ಬಂದಿಯ ವೈದ್ಯಕೀಯ ಪರೀಕ್ಷೆಯ ಕಾರ್ಯವಿಧಾನಕ್ಕೆ ಸಂಬಂಧಿಸಿದ ಮಾನದಂಡಗಳಿಗೆ ವಿವಿಧ ಬದಲಾವಣೆ ಮಾಡಲಾಗಿದೆ ಎಂದು ಡಿಜಿಸಿಎ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ
ವಿಮಾನ ಕಾರ್ಯಾಚರಣೆಗಳ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಹಾಗೂ ಪ್ರತಿಕ್ರಿಯೆಗೆ ಅನುಗುಣವಾಗಿ ಅಸ್ತಿತ್ವದಲ್ಲಿರುವ ನಿಯಮಗಳ ಸುವ್ಯವಸ್ಥಿತ ನಿಬಂಧನೆಗಳ ಜೊತೆಗೆ ಆಲ್ಕೊಹಾಲ್ ಸೇವನೆಗಾಗಿ ವಿಮಾನ ಸಿಬ್ಬಂದಿಯ ವೈದ್ಯಕೀಯ ಪರೀಕ್ಷೆಯ ಕಾರ್ಯವಿಧಾನದ ಕುರಿತು ನಾಗರಿಕ ವಿಮಾನಯಾನ ಅಗತ್ಯತೆಗಳನ್ನು (ಸಿಎಆರ್) ಪರಿಷ್ಕರಿಸಲಾಗಿದೆ ಎಂದು ತಿಳಿಸಲಾಗಿದೆ.
ಪೈಲಟ್ಗಳು ಮತ್ತು ಸಿಬ್ಬಂದಿ ಸದಸ್ಯರು ಯಾವುದೇ ರೀತಿಯ ಔಷಧವನ್ನು ಸೇವನೆ ಮಾಡಬಾರದು. ಮೌತ್ವಾಶ್ ಅಥವಾ ಟೂತ್ ಜೆಲ್ ಹಾಗೂ ಯಾವುದೇ ರೀತಿಯ ಆಲ್ಕೋಹಾಲ್ ಕಂಟೆಂಟ್ ಇರುವ ಯಾವುದೇ ಉತ್ಪನ್ನಗಳನ್ನು ಸೇವಿಸಬಾರದು. ಇಂತಹ ಉತ್ಪನ್ನಗಳನ್ನು ಸೇವಿಸಿದ ಬಳಿಕ ಉಸಿರಾಟ ಪರೀಕ್ಷೆ ನಡೆಸುವಾಗ ಅದರಲ್ಲಿ ಡ್ರಗ್ ಸೇವಿಸಿರುವುದಾಗಿ ಕಂಡು ಬರುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಉತ್ಪನ್ನಗಳ ಬಳಕೆ ಮಾಡುವ ಯಾವುದೇ ಸಿಬ್ಬಂದಿ, ಸದಸ್ಯರು ಫ್ಲೈಯಿಂಗ್ ಅಸೈನ್ಮೆಂಟ್ ಅನ್ನು ಕೈಗೊಳ್ಳುವ ಮೊದಲು ಕಂಪನಿಯ ವೈದ್ಯರನ್ನು ಸಂಪರ್ಕ ಮಾಡಬೇಕು ಎಂದು ಡಿಜಿಸಿಎ ಪ್ರಕಟಿಸಿದೆ.
ಕರಡು ಸಿಎಆರ್ ನಲ್ಲಿ ವಾಚ್ಡಾಗ್, ಸಿಬ್ಬಂದಿಗಳು ಯಾವುದೇ ಔಷಧ, ಮೌತ್ವಾಶ್ / ಟೂತ್ ಜೆಲ್ / ಸುಗಂಧ ದ್ರವ್ಯ ಅಥವಾ ಆಲ್ಕೋಹಾಲ್ ಕಂಟೆಂಟ್ ಇರುವ ಯಾವುದೇ ಉತ್ಪನ್ನಗಳನ್ನು ಉಪಯೋಗಿಸಿದಂತೆ ನಿರ್ಬಂಧಿಸಲು ಪ್ರಸ್ತಾಪಿಸಲಾಗಿದೆ. ಇನ್ನು ಸಿಎಆರ್ ನಲ್ಲಿ ‘ಪರ್ಫ್ಯೂಮ್’ ಪದವು ಸೇರ್ಪಡೆಗೊಂಡಿಲ್ಲ.