ಬಿಹಾರ, ಅ 29 (DaijiworldNews/HR): ಯಾವುದೇ ಸಾಧನೆ ಮಾಡುವುದಕ್ಕೆ ಪರಿಶ್ರಮ ಮತ್ತು ಶ್ರದ್ದೆ ಮುಖ್ಯ ಇದಕ್ಕೆ ಉದಾಹರಣೆ ಅತ್ಯಂತ ಕಠಿಣ ಪರೀಕ್ಷೆಯಾದ ಯುಪಿಎಸ್ ಸಿ ಅಲ್ಲಿ ಟಾಪರ್ ಆಗಿ IAS ಅಧಿಕಾರಿಯಾದ ಶುಭಂ ಕುಮಾರ್.
ಬಾಲ್ಯದಿಂದಲೂ ತುಂಬಾ ಚುರುಕಾಗಿದ್ದ ಬಿಹಾರದ ಕತಿಹಾರ್ ನಿವಾಸಿಯಾಗಿರುವ ಶುಭಂ ಕುಮಾರ್ ಅವರು UPSC ಪರೀಕ್ಷೆಯಲ್ಲಿ ಟಾಪರ್ ಆಗಿ IAS ಅಧಿಕಾರಿಯಾಗಿ ಮಿಂಚಿದ್ದಾರೆ.
ಇನ್ನು ಶುಭಂ ಅವರು ಐಐಟಿ ಬಾಂಬೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿಟೆಕ್ ಮಾಡಿದ್ದು,ಡಿಗ್ರಿ ಅಂತಿಮ ವರ್ಷದಲ್ಲೇ UPSC ಪರೀಕ್ಷೆಗೆ ತಯಾರಿ ಆರಂಭಿಸಿ ಓದಿನ ಭಾಗವಾಗಿ ಕಂಪನಿಯೊಂದರಲ್ಲಿ ಇಂಟರ್ನ್ ಶಿಪ್ ಮಾಡಿದ್ದು, ಅದೇ ಕಂಪನಿಯಿಂದ ಉದ್ಯೋಗದ ಆಫರ್ ಸಿಕ್ಕಿತ್ತು.
ಮೊದಲ ಬಾರಿಗೆ ಶುಭಂ ಕುಮಾರ್ 2018ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದು, ನಂತರ 2019 ರಲ್ಲಿ ಅವರು 290 ನೇ ರ್ಯಾಂಕ್ ಪಡೆದು ಭಾರತೀಯ ರಕ್ಷಣಾ ಖಾತೆ ಸೇವೆಯಲ್ಲಿ ಆಯ್ಕೆಯಾದರು. ಆದರೆ ಶುಭಂ ಅವರಿಗೆ ಐಎಎಸ್ ಅಧಿಕಾರಿಯಾಗಬೇಕೆಂಬ ಆಸೆ ಇತ್ತು. ಅದಕ್ಕಾಗಿಯೇ 2020 ರಲ್ಲಿ ಅವರು ಮತ್ತೊಮ್ಮೆ ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗಿ ಫಸ್ಟ್ ರ್ಯಾಂಕ್ ನೊಂದಿಗೆ ಪಾಸ್ ಆಗಿದ್ದಾರೆ.