ಶ್ರೀನಗರ, ಎ15(SS): ಪುಲ್ವಾಮಾ ಮಾದರಿಯಲ್ಲಿ ಮತ್ತೊಂದು ದಾಳಿಗೆ ಉಗ್ರರು ಸಿದ್ಧತೆ ನಡೆಸಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಜಮ್ಮು- ಕಾಶ್ಮೀರದಲ್ಲಿ ಲೋಕಸಭೆಯ ಎರಡನೇ ಹಂತದ ಮತದಾನಕ್ಕೆ ಸಿದ್ಧತೆ ನಡೆಯುತ್ತಿರುವ ವೇಳೆಯಲ್ಲೇ ಮೋಟಾರ್ ಸೈಕಲ್ ಬಳಸಿ ಹೆದ್ದಾರಿಯಲ್ಲಿ ವಾಹನಗಳ ಮೇಲೆ ಬಾಂಬ್ ದಾಳಿ ನಡೆಸಲು ಉಗ್ರರು ಸಿದ್ಧತೆ ನಡೆಸಿದ್ದಾರೆ. ಏ.18ರಂದು ನಡೆಯಲಿರುವ 2ನೇ ಹಂತದ ಮತದಾನಕ್ಕೂ ಮುನ್ನ ದಾಳಿ ನಡೆಸಿ, ಮತದಾನ ಪ್ರಮಾಣ ಕುಗ್ಗಿಸುವುದು ಉಗ್ರರ ಉದ್ದೇಶ ಎಂಬ ಮಾಹಿತಿ ಲಭ್ಯವಾಗಿದೆ.
ಭದ್ರತಾ ಪಡೆಗಳ ವಾಹನ ಮಾತ್ರವಲ್ಲ, ಸ್ಥಳೀಯರು ಪ್ರಯಾಣಿಸುವ ವಾಹನಗಳ ಮೇಲೂ ದಾಳಿ ನಡೆಯಬಹುದು. ಬತ್ವಾರಾ ಮತ್ತು ತಾತೂ ಪ್ರದೇಶದಲ್ಲಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ವರದಿ ಎಚ್ಚರಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ.