ನವದೆಹಲಿ, ಅ 26 (DaijiworldNews/MR): ಯಾವುದೇ ಸಾಧನೆ ಮಾಡುವುದಕ್ಕೆ ಪರಿಶ್ರಮ ಮತ್ತು ಶ್ರದ್ದೆ ಮುಖ್ಯ ಇದಕ್ಕೆ ಉದಾಹರಣೆ 6ನೇ ವಯಸ್ಸಿನಲ್ಲಿ ಶ್ರವಣ ಶಕ್ತಿ ಕಳೆದುಕೊಂಡ ಸೌಮ್ಯ.
ಸೌಮ್ಯ ಅವರು ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡಾಗ ಅವರಿಗೆ ಕೇವಲ 16 ವರ್ಷ. ಈ ಅಂಗವೈಕಲ್ಯವಿರುವುದರಿಂದ ಅನೇಕರು ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಆದರೆ ಸೌಮ್ಯ ತನ್ನ ದೈಹಿಕ ನ್ಯೂನತೆಯನ್ನು ಸವಾಲಾಗಿ ಸ್ವೀಕರಿಸಿ ಐಎಎಸ್ ಅಧಿಕಾರಿಯಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಯುಪಿಎಸ್ಸಿ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಪರೀಕ್ಷೆಯಲ್ಲಿ ಪಾಸ್ ಆಗಲು ಹಗಲೂ ರಾತ್ರಿ ಓದುವವರಿದ್ದಾರೆ. ಹಲವು ವರ್ಷಗಳ ಕಾಲ ಹಠ ಬಿಡದೆ ಪರೀಕ್ಷೆ ಬರೆಯುವವರಿದ್ದಾರೆ. ಆದರೆ ಸೌಮ್ಯ ಶರ್ಮಾ ಎಂಬ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಐಎಎಸ್ ಅಧಿಕಾರಿಯಾಗಿದ್ದಾರೆ.
ಇನ್ನು ಸೌಮ್ಯ ಶರ್ಮಾ ಅವರಿಗೆ ಕಿವುಡುತನದ ಸಮಸ್ಯೆಯಿದೆ. ತಮ್ಮ 16ನೇ ವಯಸ್ಸಿನಲ್ಲೇ ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡ ಸೌಮ್ಯ ಇದೀಗ ಐಎಎಸ್ ಅಧಿಕಾರಿಯಾಗಿದ್ದಾರೆ. ಈ ಕಾರಣದಿಂದಲೇ ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
ಸೌಮ್ಯ ಶರ್ಮಾ 2018ರಲ್ಲಿ ಅಖಿಲ ಭಾರತ 9ನೇ ರ್ಯಾಂಕ್ನೊಂದಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್ ಆದರು. ಸೌಮ್ಯಾ ಅವರ ಇನ್ನೊಂದು ಆಸಕ್ತಿದಾಯಕ ಸಂಗತಿಯೆಂದರೆ ಅವರು UPSC ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲಿ ಪಾಸ್ ಮಾಡಿದ್ದು ಮಾತ್ರವಲ್ಲದೆ ಆ ಪರೀಕ್ಷೆಗೆ ಅವರು ಯಾವುದೇ ತರಬೇತಿಯನ್ನೂ ಪಡೆದಿರಲಿಲ್ಲ. ಕೇವಲ 4 ತಿಂಗಳು ಪರೀಕ್ಷೆಗೆ ತಯಾರಿ ಮಾಡಿಕೊಂಡು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.
ತನ್ನ ಜೀವನದುದ್ದಕ್ಕೂ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಸೌಮ್ಯಾ ತನ್ನ ಶಾಲಾ ಶಿಕ್ಷಣದ ನಂತರ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕಾನೂನು ಪದವಿ ಮುಂದುವರಿಸಲು ಸೀಟು ಪಡೆದರು. 2017ರಲ್ಲಿ ಅವರು UPSC ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದರು. ಆದರೆ ಆ ಹೊತ್ತಿಗೆ ಪರೀಕ್ಷೆಗೆ ಕೇವಲ 4 ತಿಂಗಳುಗಳು ಉಳಿದಿತ್ತು. ಎಷ್ಟೋ ಜನರು ವರ್ಷಗಟ್ಟಲೆ ತರಬೇತಿ ಪಡೆದು, ಅದಕ್ಕಾಗೇ ಸಮಯ ಮೀಸಲಿಟ್ಟು ಓದಿದರೂ ಯುಪಿಎಸ್ಸಿ ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ. ಆದರೆ, ಸೌಮ್ಯ ನಾಲ್ಕೇ ತಿಂಗಳಲ್ಲಿ ಯಾವುದೇ ತರಬೇತಿ ಇಲ್ಲದೆ ಸ್ವಂತವಾಗಿ ಓದಿಕೊಂಡು, ಪರೀಕ್ಷೆ ಬರೆದು 9ನೇ ರ್ಯಾಂಕ್ ಪಡೆದಿರುವುದು ಸಾಧನೆ.
ಸೌಮ್ಯ ಶರ್ಮಾ ಅವರು ಪ್ರಸ್ತುತ ಮಹಾರಾಷ್ಟ್ರ ಕೇಡರ್ನಲ್ಲಿ ನಾಗ್ಪುರ ಜಿಲ್ಲಾ ಪರಿಷತ್ನ ಸಿಇಒ ಆಗಿ ನೇಮಕವಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕೂಡ ಸಾಕಷ್ಟು ಸಕ್ರಿಯರಾಗಿದ್ದಾರೆ. ಅವರು ಪ್ರಸ್ತುತ ನಾಗ್ಪುರದ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿ ಅರ್ಚಿತ್ ಚಂದಕ್ ಅವರನ್ನು ವಿವಾಹವಾಗಿದ್ದಾರೆ.