ಬೆಂಗಳೂರು, ಅ 28 (DaijiworldNews/AK): ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರಾದರೂ ಅಧಿಕಾರಿ ಭಾಗಿಯಾಗಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣದಲ್ಲಿ ಕೆಲ ಅಧಿಕಾರಿಗಳು ಭಾಗಿಯಾಗಿರುವ ಕುರಿತು ಆರೋಪಗಳಿರುವುದು ನಿಜ. ಅಂತಹ ಕೆಲ ಅಧಿಕಾರಿಗಳನ್ನು ಈಗಾಗಲೇ ಬಂಧಿಸಿ, ವಿಚಾರಣೆ ಮಾಡಲಾಗಿದೆ ಎಂದರು.
ತನಿಖೆ ನಡೆಸುತ್ತಿರುವ ಪ್ರತಿಯೊಬ್ಬ ಅಧಿಕಾರಿಯೂ ಬಹಳ ಎಚ್ಚರಿಕೆಯಿಂದ ತನಿಖೆ ನಡೆಸಬೇಕು ಎಂದು ಹೇಳಿದರು.
ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಸಮ್ಮಿಶ್ರ ಸರ್ಕಾರ ಪತನಕ್ಕೂ ಮೊದಲು ನನ್ನ ಮನೆಯಲ್ಲಿ ಯಾವ ಸಭೆಯೂ ನಡೆದಿಲ್ಲ. ಕುಮಾರಸ್ವಾಮಿ ಹೇಳಿದ್ದೆಲ್ಲಾ ಸತ್ಯವಲ್ಲ. ಅವರು ಆರೋಪ ಮಾಡಿಕೊಂಡು ಇರಲಿ. ಜನರೇ ಉತ್ತರ ಕೊಟ್ಟಾಗಿದೆ ಎಂದು ತಿರುಗೇಟು ನೀಡಿದರು.