ನವದೆಹಲಿ, ಅ 28 (DaijiworldNews/MS): ಯಾವ ಸಂದರ್ಭದಲ್ಲೂ ಬಿಟ್ಟುಕೊಡಬೇಡ, (Never give up) ಎನ್ನುವುದಕ್ಕೆ ಐಎಎಸ್ ಅಧಿಕಾರಿ, ನೂಪುರ್ ಗೋಯಲ್ ತಕ್ಕ ಉದಾಹಣೆಯಾಗಿ ನಿಲ್ಲುತ್ತಾರೆ. ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಒಂದಾಗಿರುವ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಪರೀಕ್ಷೆಯಲ್ಲಿ ಸಫಲತೆ ಪಡೆಯಲು ಅದೆಷ್ಟೋ ಆಕಾಂಕ್ಷಿಗಳು ಕಾಯುತ್ತಿರುತ್ತಾರೆ.
ಹಲವಾರು ಪ್ರಯತ್ನಗಳ ನಂತರವೂ UPSC ಸಂದರ್ಶನದಲ್ಲಿ ವಿಫಲವಾದ ಐಎಎಸ್ ಅಧಿಕಾರಿ ನೂಪುರ್ ಗೋಯೆಲ್ ನಿಜಕ್ಕೂ ಸ್ಪೂರ್ತಿದಾಯಕ. ಪ್ರಯತ್ನಶೀಲತೆ, ಕ ಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದ 2019 ರಲ್ಲಿ, ಅವರ ಕೊನೆಯ ಪ್ರಯತ್ನದಲ್ಲಿ11 ನೇ ಸ್ಥಾನವನ್ನು ಪಡೆದುಕೊಂಡಾಗ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಯಿತು.
ಗೋಯಲ್ ದೆಹಲಿಯ ನರೇಲಾದಲ್ಲಿ ಹುಟ್ಟಿ ಬೆಳೆದವರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ನಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದಳು. ಸಾರ್ವಜನಿಕ ಆಡಳಿತದಲ್ಲಿ IGNOU ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ನೂಪುರ್ ಅವರಿಗೆ ಅವರ ಚಿಕ್ಕಪ್ಪ ಅವಳಿಗೆ ಸ್ಫೂರ್ತಿಯಾಗಿದ್ದರು. ಯಾಕೆಂದರೆ ಅವರು ಚಿಕ್ಕಪ್ಪUPSC ಎದುರಿಸಿದ್ದರೂ, ಸಫಲತೆ ಕಂಡಿರಲಿಲ್ಲ. ನೂಪೂರ್ ಕೂಡಾ ಐಎಎಸ್ ಅಧಿಕಾರಿಯಾಗುವ ಪ್ರಯತ್ನ ಮಾಡಿದರು. ಆದರೆ ಯಶಸ್ವಿಯಾಗಲಿಲ್ಲ. ಧೃತಿಗೆಡದೆ ಮರಳಿ ಯತ್ನವನ್ನು ಮಾಡಿ ನೂಪುರ್ ಅವರು ಬದ್ದತೆಯಿಂದ ಯುಪಿಎಸ್ಸಿ ಎದುರಿಸಿ ಜಯಶಾಲಿಯಾದರು.
2014ರಲ್ಲಿ, ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ತೇರ್ಗಡೆಯಾದರು. ಆದರೆ ಅವರ ನೀಡಿದ ಇ ಂಟರ್ವ್ಯೂ ಯಶಸ್ವಿಯಾಗಲಿಲ್ಲ. ಎರಡನೇ ಪ್ರಯತ್ನದಲ್ಲಿ, ಅವರು ಪ್ರಿಲಿಮ್ಸ್ ಪರೀಕ್ಷೆಯನ್ನು ಸಹ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಮೂರನೇ ಪ್ರಯತ್ನದಲ್ಲಿ, ಅವರು ಮತ್ತೊಮ್ಮೆ ಸಂದರ್ಶನದ ಹಂತ ತಲುಪಿದರು ಆದರೆ ಅದೂ ಕೂಡಾ ಯಶಸ್ವಿಯಾಗಲಿಲ್ಲ. ನಾಲ್ಕನೇ ಪ್ರಯತ್ನವೂ ಮತ್ತೆ ವಿಫಲತೆ ಕಂಡಿತು. ಈ ನಡುವೆ ಅವರು ಆಕೆ ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಕೆಲಸಕ್ಕೆಸೇರ್ಪಡೆಗೊಂಡರು. ಅದೇ ಸಮಯದಲ್ಲಿ, ಅವರು ಕೊನೆಯ ಪ್ರಯತ್ನಕ್ಕೆ ಸಿದ್ಧರಾಗಿದ್ದರು ಮತ್ತು AIR 11 ಅನ್ನು ಪಡೆದುಕೊಳ್ಳುವ ಮೂಲಕ 2019 ರಲ್ಲಿ IAS ಅಧಿಕಾರಿಯಾಗಬೇಕೆಂಬ ತನ್ನ ಕನಸನ್ನು ನನಸಾಗಿಸಿದರು.
ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳಾಗುವ ಹಂಬಲ ಹೊಂದಿರುವವರು ಕೊನೆಯ ಪ್ರಯತ್ನದವರೆಗೂ ತಮ್ಮ ಕನಸನ್ನು ಬಿಡಬಾರದು ಎಂಬುವುದು ನೂಪುರ್ ಅವರ ಮಾತಾಗಿದೆ.