ಹೊಸದಿಲ್ಲಿ, ಅ.22(DaijiworldNews/AK): ಇಸ್ರೇಲ್ನಿಂದ ದಿಗ್ಬಂಧನಕ್ಕೊಳಗಾಗಿರುವ ಗಾಝಾಗೆ ಭಾರತವು ವೈದ್ಯಕೀಯ ನೆರವು ಹಾಗೂ ಪರಿಹಾರ ಸಾಮಾಗ್ರಿಗಳನ್ನು ರವಾನಿಸಿತು ಎಂದು ವರದಿಯಾಗಿದೆ.
ಈ ಪರಿಹಾರ ಸಾಮಾಗ್ರಿಗಳಲ್ಲಿ ಅತ್ಯಗತ್ಯ ಜೀವರಕ್ಷಕ ಔಷಧಗಳು, ಶಸ್ತ್ರಚಿಕಿತ್ಸಾ ಸಾಮಗ್ರಿಗಳು, ಟೆಂಟ್, ಟಾರ್ಪಾಲಿನ್ ಗಳು, ನೈರ್ಮಲ್ಯ ಉಪಯುಕ್ತತೆಗಳು ಸೇರಿದಂತೆ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ರವಾನಿಸಲಾಗಿದೆ” ಎಂದು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ಆಕ್ಟೋಬರ್ 7ರಂದು ಹಮಾಸ್ ಉಗ್ರರು ತನ್ನ ನೆಲದ ಮೇಲೆ ಹಠಾತ್ ದಾಳಿ ನಡೆಸಿದ ಬಳಿಕ ಗಾಝಾದ ಮೇಲೆ ಸಂಪೂರ್ಣ ದಿಗ್ಬಂಧನ ವಿಧಿಸಿರುವ ಇಸ್ರೇಲ್ ಅಲ್ಲಿಗೆ ನೀರು, ವಿದ್ಯುತ್, ಇಂಧನ ಹಾಗೂ ಆಹಾರ ಪೂರೈಕೆಯನ್ನು ಕಡಿತಗೊಳಿಸಿದೆ. ಹೀಗಾಗಿ ಜನರಿಗೆ ಅಗತ್ಯ ವಸ್ತುಗಳ ತೀವ್ರ ಅಭಾವ ಉಂಟಾಗಿದೆ.