ಬೆಂಗಳೂರು,ಅ 19 (DaijiworldNews/AK): ರಾಜಕೀಯವಾಗಿ ಹೆಣೆದ ಚಕ್ರವ್ಯೂಹವನ್ನು ಡಿಕೆಶಿ ಎದುರಿಸುತ್ತಾರೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ನಾವು ಯಾವುದೇ ಅಪರಾಧ ಮಾಡಿಲ್ಲ. ಹಾಗಾಗಿ ಯಾವುದೇ ಟ್ರಬಲ್ ಇಲ್ಲ.ನ್ಯಾಯಾಲಯ ತೀರ್ಪಿಗೆ ಮೇಲ್ಮನವಿ ಹೋಗುವುದು ಸರ್ವೇ ಸಾಮಾನ್ಯ. ನಮಗೆ ಸಮಯಾವಕಾಶ ಇದೆ. ವಕೀಲರ ಜೊತೆ ಚರ್ಚಿಸಿ ಡಿಕೆಶಿ ಮುಂದಿನ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಹೆಚ್ಡಿಕೆಯಿಂದ ಮತ್ತೆ ತಿಹಾರ್ ಜೈಲು ನೆನಪಿಸಿದ ವಿಚಾರವಾಗಿ ಪ್ರತಿಕ್ರಿಯಿಸಿ, ನ್ಯಾಯಾಲಯ ಅವರ ಸ್ವತ್ತು ಅಲ್ಲ. ಅವರು ಏನು ಬೇಕೋ ಅದನ್ನು ಹೇಳುತ್ತಿರುತ್ತಾರೆ. ನಮಗೆ ಏನು ಬೇಕೋ ಅದನ್ನ ನಾವು ಮಾಡುತ್ತಾ ಇರುತ್ತೇವೆ ಎಂದು ಹೇಳಿದರು.
ಲೋಕಸಭೆ ಚುನಾವಣೆಗೆ ರಾಜಕೀಯವಾಗಿ ಅಡೆತಡೆಗಳ ಬಗ್ಗೆ ನಮಗೆ ಯಾವುದೇ ವಾತಾವರಣ ಕಾಣಿಸುತ್ತಿಲ್ಲ. ಎಲ್ಲಾ ತನಿಖೆಗಳನ್ನು ಡಿಕೆಶಿ ಎದುರಿಸಿದ್ದಾರೆ. ಸಿಬಿಐಗೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದರು.