ನವದೆಹಲಿ, ಅ 17 (DaijiworldNews/MS): ವಿಭಿನ್ನ ಲಿಂಗಿ ಹಾಗೂ ಅವಿವಾಹಿತ ದಂಪತಿಯು ಮಕ್ಕಳನ್ನು ದತ್ತು ತೆಗೆದುಕೊಳ್ಳುವುದನ್ನು ನಿರ್ಬಂಧಿಸುವ ನಿಯಮವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.
ಸಲಿಂಗ ವಿವಾಹಗಳಿಗೆ ಕಾನೂನು ಸ್ಥಾನಮಾನದ ಬೇಡಿಕೆಯ ಅರ್ಜಿಗಳ ಮೇಲೆ ತನ್ನ ತೀರ್ಪನ್ನು ಪ್ರಕಟಿಸುವಾಗ ಕ್ವೀರ್ ಮತ್ತು ಅವಿವಾಹಿತ ದಂಪತಿಗಳು ಮಕ್ಕಳನ್ನು ದತ್ತು ಪಡೆಯುವುದನ್ನು ನಿರ್ಬಂಧಿಸುವ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದ ನಿಯಮ(ಸಿಎಆರ್ಎ)ವನ್ನು ರದ್ದು ಮಾಡಲಾಗಿದೆ.
ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಐದು ಸದಸ್ಯರ ಪೀಠವು ವಿಭಿನ್ನ ವಿವಾಹಿತ ದಂಪತಿ ಉತ್ತಮ ಪೋಷಕರಾಗಬಹುದು ಎಂದು ಭಾವಿಸುವುದು ಆಧಾರರಹಿತ ಮತ್ತು ತಾರತಮ್ಯವಾಗಿದೆ .ಮದುವೆಯಾಗುವ ಹಕ್ಕಿನಲ್ಲಿ ಒಬ್ಬರ ಸಂಗಾತಿಯನ್ನು ಆರಿಸುವ ಹಕ್ಕು ಮತ್ತು ಆದನ್ನು ಮಾನ್ಯ ಮಾಡುವ ಹಕ್ಕು ಸೇರಿದೆ. ಇದನ್ನು ಪರಿಗಣಿಸಲು ವಿಫಲವಾದಲ್ಲಿ ಅದು ಕ್ವೀರ್ ದಂಪತಿಗಳ ವಿರುದ್ಧ ತಾರತಮ್ಯ ಮಾಡಿದಂತೆ ಎಂದು ಹೇಳಿದೆ
ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರವನ್ನು (CARA) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿ ಸ್ಥಾಪಿಸಲಾಗಿದೆ, ಇದು ಭಾರತೀಯ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ಅಂತರ್-ದೇಶದ ದತ್ತುಗಳನ್ನು ಒಳಗೊಂಡಂತೆ ಭಾರತದಲ್ಲಿ ನಡೆಯುತ್ತಿರುವ ಎಲ್ಲಾ ದತ್ತುಗಳನ್ನು ನಿಯಂತ್ರಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ.