ಬೆಂಗಳೂರು, ಅ 17 (DaijiworldNews/Ak): ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಒರಿಜಿನಲ್ ಅಂತ ಬೋರ್ಡ್ ಹಾಕಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ರಾಹಿಂ ಒರಿಜಿನಲ್ ಅಂತ ಬೋರ್ಡ್ ಹಾಕಿಕೊಳ್ಳಲಿ. ಉಚ್ಛಾಟನೆ ಮಾಡಿಕೊಳ್ಳಲಿ ಅವರು ಫ್ರೀ ಇದ್ದಾರೆ. ಸಿಎಂ ಇಬ್ರಾಹಿಂ ಮಾತನ್ನ ಇಷ್ಟೊಂದು ಸೀರಿಯಸ್ ಆಗಿ ತೆಗೆದುಕೊಳ್ಳುವ ಆಗತ್ಯ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಬ್ರಾಹಿಂ ಅವರು ಏನು ಮಾಡುತ್ತಾರೆ ಮಾಡಲಿ. ದಯವಿಟ್ಟು ಇಂತಹ ಸಿಲ್ಲಿ ವಿಷಯವನ್ನ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಪಕ್ಷದ ವಿಚಾರ ನಾವು ಬಗೆಹರಿಸಿಕೊಳ್ಳುತ್ತೇವೆ, ನೀವು ಹೆಚ್ಚು ತಲೆಕಡೆಸಿಕೊಳ್ಳಬೇಡಿ ಎಂದು ಮಾಧ್ಯಮದವರ ಮೇಲೆ ಹರಿಹಾಯ್ದರು.
ನನ್ನದು ಒರಿಜಿನಲ್ ಜೆಡಿಎಸ್ . ನಮ್ಮದು ಜಾತ್ಯತೀತ ಜೆಡಿಎಸ್. ನಮ್ಮ ಪಕ್ಷದ ನಿರ್ಧಾರ ಮೈತ್ರಿಗೆ ಒಪ್ಪಿಗೆ ಇಲ್ಲ. ಶಾಸಕರ ಜೊತೆ ಒನ್ ಟು ಮಾತಾಡ್ತೀನಿ. ಶಾಸಕರು ನನ್ನ ಜೊತೆ ಮಾತಾಡಿದ್ದಾರೆ. ಯಾರ್ ಯಾರು ಅಂತ ಹೇಳೋದಿಲ್ಲ. ಸಮಯ ಬಂದಾಗ ಯಾರು ಯಾರು ಬರ್ತಾರೆ ಅಂತ ಗೊತ್ತಾಗುತ್ತದೆ ಎಂದು ಇಬ್ರಾಹಿಂ ಹೇಳಿದ್ದರು.