ಬೆಂಗಳೂರು, ಅ 17 (DaijiworldNews/AK): ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ದಿನವನ್ನು ಸ್ಫೂರ್ತಿ ದಿನ ಹೆಸರಿನಲ್ಲಿ ಆಚರಿಸಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.
ಈ ಹಿಂದಿನ ಸರಕಾರ ಘೋಷಣೆ ಮಾಡಿತ್ತು. ಆದರೆ, ಚುನಾವಣೆ ಕಾರಣದಿಂದಾಗಿ ಆಚರಿಸಲು ಆಗಿಲ್ಲ. ಆದರೆ, ನಮ್ಮ ಸರಕಾರ ಆ ದಿನವನ್ನು ಸ್ಫೂರ್ತಿ ದಿನ ಎಂದು ಆಚರಿಸಲಾಗುವುದು ಎಂದು ತಿಳಿಸಿದರು.
ಕಲೆ ಮತ್ತು ತಂತ್ರಜ್ಞಾನದ ಮೂಲಕ ವಿದೇಶಿ ಕಲಾವಿದರಿಂದ ಸಿದ್ದಗೊಂಡ ಪಿಆರ್ಕೆ ಕಲಾಕೃತಿ ಅ.16 ಖಾಸಗಿ ಹೋಟೆಲ್ನಲ್ಲಿ ಅನಾವರಣ ಆಗಿದೆ. ಪುನೀತ್ ಹುಟ್ಟು ಹಾಕಿರೋ ಪಿಆರ್ಕೆ ಸ್ಟುಡಿಯೋಸ್ ಸಹಯೋಗದಲ್ಲಿ ಅಪ್ಪು ಕಲಾಕೃತಿ ಬಿಡುಗಡೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ಕುಟುಂಬದ ಜೊತೆ ಸಿಎಂ ಸಿದ್ದರಾಮಯ್ಯ ಕೂಡ ಸಾಥ್ ನೀಡಿದರು.
ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ಇಂದು ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಅವರ ಪ್ರತಿಮೆ ಅನಾವರಣ ಮಾಡಿದ್ದೇವೆ. ಈ ಪ್ರತಿಮೆಯನ್ನ N3K ಸ್ಟುಡಿಯೋಸ್- ಪಿಆರ್ಕೆ ಸ್ಟುಡಿಯೋಸ್ ಸಹಯೋಗದಲ್ಲಿ ಮಾಡಿದ್ದಾರೆ. ಕರ್ನಾಟಕ ಕಂಡಂತಹ ಸರಳ, ಸೌಜನ್ಯ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಪುನೀತ್ ಅವರಾಗಿದ್ದರು. ಇಡೀ ಕರ್ನಾಟಕದಲ್ಲಿ ಬಹುಶಃ ಇವರಷ್ಟು ಅಭಿಮಾನಿಗಳನ್ನ ಯಾರೂ ಪಡೆದುಕೊಂಡಿರಲಿಲ್ಲ ಎಂದು ಹೇಳಿದರು.
ಪುನೀತ್ ಕಲಾಕೃತಿಯನ್ನ ಆಂತ್ರಾಪೋಸ್ಟಾ ತಂತ್ರಜ್ಞಾನ ಬಳಸಿ ಮಾಡಲಾಗಿದ್ದು, ಇದಕ್ಕಾಗಿ ಸಾಕಷ್ಟು ಸಂಶೋಧನೆ ಮಾಡಿದ್ದೇನೆ ಎಂದು ಕಲಾವಿದ ವಿಚಾರ್ ಮಾತನಾಡಿದ್ದಾರೆ. ಆಸ್ಕರ್ ವಿನ್ನಿಂಗ್ ಅವತಾರ್ ಮೂವಿಗೆ ಬಳಸಿರೋ Z ಬ್ರಷ್ ಸಾಫ್ಟ್ವೇರ್ ಬಳಸಿ ಮಾಡಲಾಗಿದೆ. ಬೇರೆ ಬೇರೆ ರೀತಿಯ ಲೈಟಿಂಗ್ ಬಳಸಿ ಮಾಡಲಾಗಿದೆ. ಡಿಜಿಟಲ್ನಲ್ಲಿ ಮಾಡಿ, ತ್ರೀಡಿಯಲ್ಲಿ ಮಾಡಿದ್ದೇನೆ. ಇದು ನನ್ನ ಬಹಳ ದಿನದ ಕನಸು ಕನಸಾಗಿತ್ತು. ಈಗ ನನಸಾಗಿದೆ ಎಂದು ಕಲಾವಿದ ವಿಚಾರ್ ಹೇಳಿದ್ದಾರೆ.
ರಾಘಣ್ಣ ಮಾತನಾಡಿ, ಈ ತಿಂಗಳ 29ಕ್ಕೆ ಅಪ್ಪು ಅಗಲಿ ಎರಡು ವರ್ಷ ಆಗಲಿದೆ. ಇಂದು ಈ ಪ್ರತಿಮೆ ಪ್ರೀತಿಯಿಂದ ತಯಾರಾಗಿದೆ. ಈ ಪ್ರತಿಮೆಯನ್ನು ಕಷ್ಟ ಪಟ್ಟು ಮಾಡಿಲ್ಲ, ಇಷ್ಟ ಪಟ್ಟು ಮಾಡಿದ್ದಾರೆ ಎಂದರು.