ಲಕ್ನೋ, ಅ 16 (DaijiworldNews/HR): ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯದ ವೇಳೆ ಜೋರಾಗಿ ಬೀಸಿದ ಗಾಳಿಯಿಂದಾಗಿ ಕ್ರೀಡಾಂಗಣದ ಮೇಲ್ಛಾವಣಿಯಿಂದ ಕೆಳಗಿನ ಸೀಟುಗಳ ಮೇಲೆ ಹಲವಾರು ಹೋರ್ಡಿಂಗ್ಗಳು ಬಿದ್ದಿರುವ ಘಟನೆ ನಡೆದಿದೆ.
ಮಳೆ ಕೆಲ ಕಾಲ ಆಟವನ್ನು ನಿಲ್ಲಿಸಲಾಗಿದ್ದು, ಬಳಿಕ ಬಲವಾದ ಭಾರೀ ಗಾಳಿಯು ಹಲವಾರು ಕಬ್ಬಿಣದ ಬದಿಗಳಿಂದ ಕೂಡಿದ ಹೋರ್ಡಿಂಗ್ಗಳು ಬಿದ್ದಿದೆ ಎನ್ನಲಾಗಿದೆ.
ಇನ್ನು ಛಾವಣಿಯಿಂದ ಕೆಳ ಹಂತಗಳಲ್ಲಿ ಕುಳಿತಿದ್ದ ಜನರ ಮೇಲೆ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆಗಳಿತ್ತು. ಅದೃಷ್ಟವಶಾತ್ ಸ್ಟ್ಯಾಂಡ್ ಬಹುಪಾಲು ಖಾಲಿಯಾಗಿತ್ತು. ಎರಡನೇ ಇನ್ನಿಂಗ್ಸ್ ಆರಂಭವಾಗುವ ವೇಳೆಗೆ ಭದ್ರತಾ ಸಿಬಂದಿಗಳು ಎಲ್ಲಾ ಪ್ರೇಕ್ಷಕರನ್ನು ಮೇಲಿನ ಸೀಟುಗಳಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದರು.