ಹರಿಯಾಣ,ಅ 14 (DaijiworldNews/AK): ಮೈಕ್ರೋಸಾಫ್ಟ್ ದೀದಿ ಅಥವಾ ಶಾರದಾ ದೀದಿ ಎಂದು ಪ್ರೀತಿಯಿಂದ ಕರೆಯಲ್ಪಡುವ ಶಾರದಾ ಖಾಪ್ರಾ ಅವರ ಜೀವನ ಪಯಣದ ಹೇಗಿತ್ತು ಅನ್ನುವುದನ್ನು ತಿಳಿಯೋಣ. ಇವರು ಇಂದಿನ ಡಿಜಿಟಲ್ ಯುಗದಲ್ಲಿ ಯಾರು ಒಂದು ಉತ್ತಮ ವೃತ್ತಿಯನ್ನು ಆರಂಭಿಸಿ ಯಶಸ್ವಿಯಾಗಬೇಕು ಅಂದುಕೊಂಡಿದ್ದಾರೋ ಅವರೆಲ್ಲರಿಗೂ ಸ್ಪೂರ್ತಿಯಾದವರು.
ಹರಿಯಾಣದ ಪುಟ್ಟ ಹಳ್ಳಿಯೊಂದರಲ್ಲಿ ಜನಿಸಿ ಶಾರದಾ ಖಾಪ್ರಾ ಅವರಿಗೆ ಈಗ 23 ವರ್ಷ. ಹಳ್ಳಿಯಲ್ಲೇ ಇಂಜಿನಿಯರಿಂಗ್ ಪದವಿ ಪಡೆದವರು. ಶಾರದಾ, ಪ್ರತಿಷ್ಠಿತ ಮೈಕ್ರೋಸಾಫ್ಟ್ಗೆ ಸೇರಿದರು. ಆದರೆ ಇದು ತನ್ನ ಕನಸಲ್ಲ ಎಂದು ತಿಳಿದ ಶಾರದಾ ಯೂಟ್ಯೂಬ್ ಚಾನೆಲ್ ಆರಂಭಿಸಿ ಇಂದು ಹಲವರಿಗೆ ಮಾದರಿಯಾಗಿದ್ದಾರೆ.
ಅವರು 2017 ರಿಂದ 2021 ಒಳಗೆ ನೇತಾಜಿ ಸುಭಾಷ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿಗೆ ಸೇರಿದರು ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ಶಾರದಾ ಎಂಜಿನಿಯರಿಂಗ್ ಕೋರ್ಸ್ನಲ್ಲಿ 8.8 ಗ್ರೇಡ್ ಗಳಿಸಿದ್ದರು.
ಶಾರದಾಗೆ ಮೈಕ್ರೋಸಾಫ್ಟ್ನಲ್ಲಿ ಮೂರು ತಿಂಗಳ ಕಾಲ ಸಾಫ್ಟ್ವೇರ್ ಇಂಜಿನಿಯರ್ ಆಗಿ ಇಂಟರ್ನ್ ಮಾಡುವ ಅವಕಾಶ ಸಿಕ್ಕಿತು.ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಅವರು ಮೂರು ತಿಂಗಳ ಕಾಲ ಭಾರತೀಯ ರಕ್ಷಣಾ ಸಚಿವಾಲಯದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆನಲ್ಲಿ ಸಂಶೋಧನಾ ಸಹಾಯಕರಾಗಿ ಸೇರಿಕೊಂಡರು. ಇದರ ನಂತರ, ಜುಲೈ 2021 ರಲ್ಲಿ, ಅವರು ತೆಲಂಗಾಣದ ಮೈಕ್ರೋಸಾಫ್ಟ್ನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ನೇಮಕಗೊಂಡರು.
ಮೈಕ್ರೋಸಾಫ್ಟ್ನಲ್ಲಿ ಅವರ ಯಶಸ್ವಿ ವೃತ್ತಿಜೀವನದ ಹೊರತಾಗಿಯೂ, ಅವರು ಯಾವಾಗಲೂ ವಿಭಿನ್ನವಾಗಿ ಏನನ್ನಾದರೂ ಮಾಡುವ ಬಯಕೆಯನ್ನು ಹೊಂದಿದ್ದರು. ಇದನ್ನು ಸಾಧಿಸಲು, ಅವರು "ಅಪ್ನಾ ಕಾಲೇಜ್" ಎಂಬ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು. ಇದರಲ್ಲಿ ಶಾರದಾ ಶೈಕ್ಷಣಿಕ ವಿಡಿಯೋಗಳನ್ನು ಹಾಕುತ್ತಲೇ ಇದ್ದರು.
ಅವರ ಚಾನಲ್ ಶೀಘ್ರದಲ್ಲೇ ಜನರಲ್ಲಿ ಜನಪ್ರಿಯತೆಯನ್ನು ಗಳಿಸಿವ ಮೂಲಕ ಸೆಲೆಬ್ರಿಟಿ ಸ್ಥಾನಮಾನಕ್ಕೆ ಏರಿದರು. ಸದ್ಯ ಅವರು ಇನ್ಟ್ರಾಗ್ರಾಂ ನಲ್ಲಿ 354K ಫಾಲೋವರ್ಸ್ ಹೊಂದಿದ್ದಾರೆ. ಈ ದಿನಗಳಲ್ಲಿ ಎಲ್ಲರೂ ಅವರನ್ನು "ಮೈಕ್ರೋಸಾಫ್ಟ್ ದೀದಿ" ಎಂದು ಕರೆಯುತ್ತಾರೆ.