ಹುಬ್ಬಳ್ಳಿ,ಅ 14 (DaijiworldNews/HR): ಅಕ್ರಮವಾಗಿ ಪಟಾಕಿ ಸಂಗ್ರಹ ಆರೋಪದಡಿ ಹುಬ್ಬಳ್ಳಿಯ ಶೆರೆವಾಡ ಗ್ರಾಮದಲ್ಲಿ ಪಟಾಕಿ ಗೋಡೌನ್ ಮೇಲೆ ಇಂದುಕಂದಾಯ ಇಲಾಖೆ, ಪೊಲೀಸ್ ಇಲಾಖೆ, ವಾಯುಮಾಲಿನ್ಯ, ಅಗ್ನಿ ಶಾಮಕ ದಳದ ಜಂಟಿ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು 72 ಟನ್ ಪಟಾಕಿ ಪತ್ತೆ ಹಚ್ಚಿದ್ದಾರೆ.
ಅತ್ತಿಬೆಲೆ ಪಟಾಕಿ ದುರಂತದಿಂದ ಜಿಲ್ಲೆಯ ಕೆಲವು ಕಡೆ ಅಧಿಕಾರಿಗಳು ದಾಳಿ ಮಾಡಿದ್ದು, ಕೆಲ ಪಟಾಕಿಗಳ ಮೇಲೆ ಯಾವದೇ ಅಧಿಕೃತ ನಂಬರ್ ಇರದ ಕಾರಣ ಆ ಪಟಾಕಿಯನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಇನ್ನು ಬರೋಬ್ಬರಿ 72 ಟನ್ ಪಟಾಕಿ ಪತ್ತೆಹಚ್ಚಳಲಾಗಿದ್ದು, 200 ಟನ್ ಸಂಗ್ರಹ ಮಾಡಲು ಮಾಲೀಕರು ಲೈಸೆನ್ಸ್ ಪಡೆದಿದ್ದಾರಂತೆ. ಆದರೆ ಇಲ್ಲಿರುವ ಕೆಲ ಪಟಾಕಿಗಳ ಮೇಲೆ ಗ್ರೀನ್ ಪಟಾಕಿ ಎಂದು ನಮೂದಿಸಿದ್ದರು ಅದಕ್ಕೆ ಯಾವದೇ ಅಧಿಕೃತ ನಂಬರ್ ಇಲ್ಲ. ಇದು ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿದೆ. ಅದೇ ಕಾರಣಕ್ಕೆ 72 ಟನ್ ಪಟಾಕಿಯಲ್ಲಿ ಯಾವ ಪಟಾಕಿ ಬಾಕ್ಸ್ ಮೇಲೆ ನಂಬರ್ ಇಲ್ಲವೋ ಅಂತಹ ಸುಮಾರು 20 ಟನ್ ಪಟಾಕಿಯನ್ನು ಸೀಜ್ ಮಾಡಲಾಗಿದೆ.