ಶಿವಮೊಗ್ಗ,ಅ 09 (DaijiworldNews/AK):ರಾಗಿಗುಡ್ಡದಲ್ಲಿ ನಡೆದ ಗಲಭೆ ಪ್ರಕರಣದ ತಪ್ಪಿತಸ್ಥರನ್ನು ಮುಲಾಜಿಲ್ಲದೆ ಎನ್ ಕೌಂಟರ್ ಮಾಡಬೇಕು ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.
ರಾಗಿಗುಡ್ಡದ ಗಲಭೆ ವಿಚಾರದಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಯಾರೂ ಮಾಡಬಾರದು. ಖಡ್ಗ, ಔರಂಗಜೇಬನ ಚಿತ್ರ ಪ್ರದರ್ಶನ ಸಂಘರ್ಷಕ್ಕೆ ಕಾರಣವಾಗುತ್ತದೆ. ಜಿಲ್ಲಾಡಳಿತ ತಡೆಯಬೇಕಿತ್ತು, ಅದನ್ನು ಮಾಡಿಲ್ಲ. ಮತಗಳನ್ನು ವಿಭಜನೆ ಮಾಡುವ ಕಾರ್ಯ ನಡೆದಿದೆ.
ಅಪರಾಧಿಗಳನ್ನು ಕೇವಲ ಬಂಧಿಸಿದರೆ ಸಾಲದು, ಎನ್ ಕೌಂಟರ್ ಮಾಡಬೇಕು ಎಂದರು.ತನಿಖಾಧಿಕಾರಿ ಅಮಾನತು ಆಗಬಾರದಿತ್ತು. ಎಸ್ಪಿ ಹೇಳಿಕೆ ನೋಡಿದೆ, ಹಾಗಾದರೆ ಗಲಾಟೆ ಮಾಡಿದವರು ಯಾರು? ಭಯೋತ್ಪಾದನೆ ಮಟ್ಟಹಾಕದಿದ್ದರೆ ಕಷ್ಟವಾದೀತು ಎಂದರು.