ಬೆಂಗಳೂರು, ಅ 08 (DaijiworldNews/AK):ಇಸ್ರೇಲ್ ಮತ್ತು ಪೆಲೆಸ್ತೀನ್ ನ ಹಮಾಸ್ ಬಂಡುಕೋರರ ನಡುವೆ ಕದನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್ ನಲ್ಲಿರುವ ಕರ್ನಾಟಕದವರು ಯಾವುದೇ ಸಹಾಯ ಅಗತ್ಯಬಿದ್ದಲ್ಲಿ ಕರ್ನಾಟಕ ಸರಕಾರದ ತುರ್ತು ಕಾರ್ಯಾಚರಣೆ ಕೇಂದ್ರದ ಸಹಾಯವಾಣಿ ಸಂಖ್ಯೆ: 080-222340676, 080-22253707 ಅಥವಾ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಾಯವಾಣಿ +97235226748 ಅನ್ನು ಸಂಪರ್ಕಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋರಿದ್ದಾರೆ.
ಯಾವುದೇ ಹೆಚ್ಚಿನ ಮಾರ್ಗದರ್ಶನಕ್ಕೆ ರಾಯಬಾರಿ ಕಚೇರಿಯ ಸಿಬ್ಬಂದಿಗಳನ್ನ ಸಂಪರ್ಕಿಸುವಂತೆ ಸೂಚಿಸಲಾಗಿದೆ.
ನಮ್ಮ ನಾಗರಿಕರ ಸುರಕ್ಷತೆ ದೃಷ್ಟಿಯಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇಸ್ರೇಲ್ನಲ್ಲಿ ಎಲ್ಲಾ ಭಾರತೀಯ ಪ್ರಜೆಗಳು ಜಾಗರೂಕರಾಗಿರಲು ಮತ್ತು ಸ್ಥಳೀಯ ಅಧಿಕಾರಿಗಳ ಸೂಚನೆ ಮತ್ತು ಸುರಕ್ಷತಾ ಮಾರ್ಗಸೂಚಿ ಪಾಲಿಸುವಂತೆ ವಿನಂತಿಸಲಾಗಿದೆ. ಅನಗತ್ಯ ಪ್ರಯಾಣಗಳನ್ನು ತಪ್ಪಿಸಿಮತ್ತು ಸುರಕ್ಷತಾ ಅಶ್ರಯಗಳ ಹತ್ತಿರ ಇರಬೇಕಾಗಿ ವಿನಂತಿಸಲಾಗಿದೆ.